ಕುಟ್ಟ, ಆ. 12: 1992ರಲ್ಲಿ ಅಯೋಧ್ಯಗೆ ತೆರಳಿ ಕರಸೇವೆಯಲ್ಲಿ ಭಾಗವಹಿಸಿದ್ದ ಕುಟ್ಟದ ಸೂರ್ತಲೆ ರಾಜ ಅವರನ್ನು ಕುಟ್ಟದ ಆರ್.ಎಸ್.ಎಸ್. ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಹೊಟ್ಟೇಂಗಡ ರಮೇಶ್, ದುಗ್ಗಂಡ ರವಿ, ಕಾಕೇರ ಶಂಬು, ನಾಧಂಗಲ್ ರವಿ, ಹೊಟ್ಟೇಂಗಡ ತಿಮ್ಮಯ್ಯ, ದನೀಶ್, ಕೇಶವನ್, ಸತೀಶ್, ಎಂ. ಕರುಂಬಯ್ಯ ಹಾಗೂ ರಾಜ ಅವರ ಕುಟುಂಬಸ್ಥರು ಹಾಜರಿದ್ದರು.