ಶನಿವಾರಸಂತೆ, ಆ. 13: ಸಾಮಥ್ರ್ಯಕ್ಕಿಂತ ಹೆಚ್ಚು ಭಾರದ ವಸ್ತುಗಳನ್ನು ತುಂಬಿಕೊಂಡು ಸಾಗಿಸುವ ಮೂಲಕ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿದ ಲಾರಿ (ಕೆಎ-13 ಸಿ 5781) ಚಾಲಕನಿಗೆ ಮಡಿಕೇರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ರೂ. 1,500 ದಂಡ ಸೇರಿದಂತೆ 10 ತಿಂಗಳಿಂದ ಪಾವತಿಸಲು ಬಾಕಿಯಿದ್ದ ರೂ. 36,400 ತೆರಿಗೆ ಹಣದೊಂದಿಗೆ ಒಟ್ಟು ರೂ. 37,900 ಕಟ್ಟಿಸಿಕೊಂಡ ಘಟನೆ ಗುಡುಗಳಲೆಯಲ್ಲಿ ನಡೆದಿದೆ. ಹಾಸನದ ಗೌರಮ್ಮ ಎಂಬವರ ಲಾರಿಯನ್ನು ಚಂದ್ರ ಎಂಬಾತ ಚಾಲಿಸುತ್ತಿದ್ದಾಗ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದರು.