ಪೆÇನ್ನಂಪೇಟೆ, ಆ. 11: ಪೆÇನ್ನಂಪೇಟೆಯ ಕುಂದ ರಸ್ತೆಯಲ್ಲಿ ವಾಸವಾಗಿದ್ದ 50 ವರ್ಷ ವಯಸ್ಸಿನ ಪುರುಷ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ ಕುಂದ ರಸ್ತೆಯಲ್ಲಿ ಸೋಂಕಿತ ವ್ಯಕ್ತಿ ವಾಸವಾಗಿದ್ದ ಮನೆ ವ್ಯಾಪ್ತಿಯ 4 ಮನೆಗಳನ್ನು ಸೀಲ್‍ಡೌನ್ ಮಾಡಲಾಗಿದೆ ಹಾಗೂ ತ್ಯಾಗರಾಜ ರಸ್ತೆಯಲ್ಲಿ ವಾಸವಾಗಿದ್ದ 53 ವರ್ಷದ ಮಹಿಳೆಗೂ ಕೂಡ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತ ಮಹಿಳೆ ವಾಸವಾಗಿದ್ದ ಮನೆಯ ವ್ಯಾಪ್ತಿಯ 6 ಮನೆಗಳನ್ನು ಸೀಲ್‍ಡೌನ್ ಮಾಡಲಾಗಿದೆ.

ಸೋಂಕಿತರು ವಾಸವಾಗಿದ್ದ ವಲಯವನ್ನು ಸ್ಯಾನಿಟೈಜ್ ಮಾಡಲಾಗಿದೆ. ಈ ಸಂದರ್ಭ ಪೆÇನ್ನಂಪೇಟೆ ಪಿಡಿಒ ಪುಟ್ಟರಾಜು, ಆರ್‍ಐ ರಾಧಾಕೃಷ್ಣ, ವಿ.ಎ. ಯಶವಂತ್, ಹುದಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ಅವಿನಾಶ್ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಇದ್ದರು. ಟಿ.ಆರ್. ರಸ್ತೆಯ ಕೊರೊನಾ ಸೋಂಕಿತ ಮಹಿಳೆಯನ್ನು ಆ್ಯಂಬುಲೆನ್ಸ್‍ನಲ್ಲಿ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಗ್ರಾ.ಪಂ. ಸದಸ್ಯ ಅಣ್ಣೀರ ಹರೀಶ್, ಆರೋಗ್ಯ ಸಹಾಯಕಿ ಉಷಾರಾಣಿ, ಆಶಾ ಕಾರ್ಯಕರ್ತೆಯರಾದ ಪೆÇನ್ನಮ್ಮ, ಪ್ರಮೀತ ಹಾಗೂ ಸ್ಥಳೀಯರಾದ ಅಣ್ಣು ಹಾಜರಿದ್ದರು.