ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರಕ್ಕೆ ತಾ. 5 ರಂದು ಭೂಮಿಪೂಜೆ ನಡೆಯಿತು. ಇದರ ಸಲುವಾಗಿ ಜಿಲ್ಲೆಯಲ್ಲಿಯೂ ವಿವಿಧ ದೇವಾಲಯಗಳಲ್ಲಿ ಹಲವು ಸಂಘಗಳ ವತಿಯಿಂದ ರಾಮ ಸ್ಮರಣೆ, ಪೂಜೆ ನಡೆಯಿತು.ಗೋಣಿಕೊಪ್ಪಲು: ಪೆÇನ್ನಂಪೇಟೆಯ ಬಸವೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭ 1992ರಲ್ಲಿ ಪೆÇನ್ನಂಪೇಟೆಯಿಂದ ಅಯೋಧ್ಯೆಗೆ ತೆರಳಿದ ಕರಸೇವಕರಾದ ಮೋಹನ್ ಬಾಬು ಪಿ.ಆರ್. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘ ಪರಿವಾರದ ಪ್ರಮುಖರಾದ ಕೆ.ಜಿ. ಪಧ್ಮನಾಭ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಮುದ್ದಿಯಡ ಮಂಜು ಗಣಪತಿ, ತಾಲೂಕು ಉಪಾಧ್ಯಕ್ಷ ಚೋಡುಮಾಡ ಶ್ಯಾಮ್ ಪೂಣಚ್ಚ, ಗ್ರಾಮ ಪಂಚಾಯಿತಿ ಸದಸ್ಯರಾದ ಅಮ್ಮತ್ತಿರ ಸುರೇಶ್, ಮೂಕಳೆರ ಕಾವ್ಯ, ಪಂದಿಯಂಡ ಹರೀಶ್, ಮತ್ರಂಡ ಕಬೀರ್ ದಾಸ್, ತಾಲೂಕು ಕೃಷಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತೋರಿರ ವಿನು, ಕೋಟೆರ ಕಿಶನ್, ಕೆ.ಬಿ. ವಿನು, ರೇಖಾ ಶ್ರೀಧರ್, ಎಂ.ಎ. ವಿಜು, ವೈಶಾಕ್, ಮೂಕಳೆರ ಮಧು, ಭರತ್, ದಿಲೀಪ್, ಶೈಲೇಂದ್ರ, ಶಿವಣ್ಣ, ಮಹೇಶ್ ಎಚ್.ಎನ್, ಟಿ.ಜಿ. ಮನುಕುಮಾರ್, ಎಳನೀರು ಸುರೇಶ್, ರಾಜೇಶ್, ಮೆಲ್ವಿನ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣದ ಜಿತು ಪೂಜಾರಿ ಸಿಹಿ ಹಂಚಿದರು.ಸಂಪಾಜೆ: ತಾ. 8 ರಂದು ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಅಯೋಧ್ಯಾ ಕರಸೇವಕರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತಾ, ಸಂಪಾಜೆ ಗ್ರಾಮದ ಹಿಂದೂ ಕಾರ್ಯಕರ್ತರ ತ್ಯಾಗ, ಪರಿಶ್ರಮ, ಅಳಿಲುಸೇವೆಗೆ ಬೆಲೆಕೊಡುವ ಕಾರ್ಯಕ್ರಮವನ್ನು ನಡೆಸಲಾಯಿತು.
ಕರಸೇವಕರಾದ ರಮಾನಂದ ಬಾಳೆಕಜೆ, ಅಳಿಕೆ ದಯಾನಂದ, ಯಶೋಧರ ಬಿ.ಜೆ, ಮೋಹನ ಕುಮಾರ್ ಬಾಲಂಬಿ, ವೆಂಕಟರಮಣ ಭಟ್ ಕೊಯನಾಡು, ಗಬ್ಬಲಡ್ಕ ಪುಟ್ಟಣ್ಣ, ಕುಶಾಲಪ್ಪ ಬಾಳೆಕಜೆ, ಪುರುಷೋತ್ತಮ ಕುದುಕ್ಕುಳಿ, ಪುರುಷೋತ್ತಮ ಕುಂಬಾಡಿ, ಚಂದ್ರಶೇಖರ ದೇವರಗುಂಡ, ಸುಂದರ ಕಲ್ಲುಗದ್ದೆ, ಕೇಶವ ಪ್ರಸಾದ್ ಬಾಳೆಕಜೆ, ಯೋಗೀಶ ಬಂಟೋಡಿ (ರವಿ), ರಾಜೇಶ ಬಿ.ಎನ್. ಅವರುಗಳನ್ನು ಗೌರವಪೂರ್ವಕವಾಗಿ ಸ್ಮರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರಾಜಾರಾಮ್ ಕಳಗಿ ವಹಿಸಿದ್ದರು. ನಿವೃತ್ತ ಸೈನಿಕರಾದ ಮಾಯಿಲಪ್ಪ ಮೂಲ್ಯ, ಸಂಪಾಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಮಾರ್ ಚೆದ್ಕಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪರಿವಾರ ಸಂಘಟನೆಯ ಕಾರ್ಯಕರ್ತರು, ಭಜನಾ ಮಂಡಳಿಯ ಸದಸ್ಯರುಗಳು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರುಗಳು, ಹಿಂದೂಪರ ಸಂಘಟನೆಯ ಹಿರಿಯರು ಉಪಸ್ಥಿತರಿದ್ದರು.
ಸಿದ್ದಾಪುರ: ಶ್ರೀ ರಾಮಮಂದಿರ ನಿರ್ಮಾಣದ ಹಿನ್ನೆಲೆ ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ದೇವಾಲಯದಲ್ಲೂ ವಿಶೇಷ ಪೂಜೆ ನೆರವೇರಿಸಲಾಯಿತು.
ದೇವಾಲಯ ಸಮಿತಿಯ ಅಧ್ಯಕ್ಷ ಪಾಲಚಂಡ ಚೀಯಣ್ಣ, ಕಾರ್ಯದರ್ಶಿ ಸುನಿಲ್ ಕುಮಾರ್, ಪ್ರಮುಖರಾದ ವಿ.ಕೆ. ಲೋಕೇಶ್, ಟಿ.ಸಿ. ಅಶೋಕ್, ಪಾಲಚಂಡ ಅಚ್ಚಯ್ಯ ಮತ್ತಿತರರು ಹಾಜರಿದ್ದು, ಪ್ರಾರ್ಥನೆ ಸಲ್ಲಿಸಿದರು.
ಅಮ್ಮತ್ತಿ: ಅಮ್ಮತ್ತಿ ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಸರಳ ಕಾರ್ಯಕ್ರಮ ನಡೆಯಿತು.
ಕರಸೇವಕರಾದ ಬೊಮ್ಮಂಡ ನಾಚಪ್ಪ ಅವರನ್ನು ಗೌರವಿಸಲಾಯಿತು. ಊರಿನ ಹಿರಿಯರಾದ ನೆಲ್ಲಮಕ್ಕಡ ಸೋಮಯ್ಯ ಹಾಗೂ ನಾಚಪ್ಪ ತಮ್ಮ ಅಂದಿನ ಅನುಭವವನ್ನು ಹಂಚಿಕೊಂಡರು.
ದೇವಸ್ಥಾನ ಸಮಿತಿಯ ಅಧ್ಯಕ್ಷ ಮಾಚಿಮಂಡ ಮಧು ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕುಟ್ಟಂಡ ಪ್ರಿನ್ಸ್ ಗಣಪತಿ, ಪ್ರಮುಖ ಐನಂಡ ಜಪ್ಪು ಅಚ್ಚಪ್ಪ, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಐನಂಡ ಲಾಲಾ ಅಯ್ಯಣ್ಣ, ಬಿಜೆಪಿ ಮುಖಂಡರಾದ ಮುಕ್ಕಾಟೀರ ಬೋಪಣ್ಣ, ಮಾಚಿಮಂಡ ಜಯಾ ಉತ್ತಪ್ಪ ಹಾಗೂ ಬಸವೇಶ್ವರ ದೇವಸ್ಥಾನ ಹಾಗೂ ವಿಶ್ವ ಹಿಂದೂ ಪರಿಷತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.