ಕಡಂಗ, ಆ. 11: ಕಡಂಗ ದಿಂದ ಕರಡ ಮುಖ್ಯರಸ್ತೆಯಲ್ಲಿ ಧಾರಾಕಾರ ಮಳೆಯಿಂದ ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದಿದು, ಹಲವು ಕಂಬಗಳು ಅಪಾಯದಂಚಿನಲ್ಲಿವೆ. ಗ್ರಾಮಸ್ಥರು ಇದರಿಂದ ಭಯಭೀತರಾಗಿದ್ದಾರೆ. ಕಡಂಗ ಭಾಗಕ್ಕೆ ವಿದ್ಯುತ್ ಸಂಪರ್ಕ ಕಡಿತವಾಗಿ ಗ್ರಾಮವೇ ಸಂಪೂರ್ಣ ಕತ್ತಲಲ್ಲಿ ಮುಳು ಗಿದೆ. ಇದರಿಂದ ಮನೆಯಲ್ಲಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಬಂದಿದೆ. ವ್ಯಾಪಾರಸ್ಥರಿಗೂ ನಷ್ಟ ಉಂಟಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅಪಾಯದ ಅಂಚಿನಲ್ಲಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸಬೇಕು ಮತ್ತು ಈ ಭಾಗದ ವಿದ್ಯುತ್ ಸಂಪರ್ಕ ಸರಿಪಡಿಸಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. -ನೌಫಲ್