ಮಡಿಕೇರಿ, ಆ. 11: ಜಿಲ್ಲೆಯಲ್ಲಿ ಹೊಸದಾಗಿ 19 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 760 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 518 ಮಂದಿ ಗುಣಮುಖ ರಾಗಿದ್ದಾರೆ. ಒಟ್ಟು 11 ಮಂದಿ ಮೃತಪಟ್ಟಿದ್ದು, 231 ಪ್ರಕರಣಗಳು ಸಕ್ರಿಯ ಮಾಹಿತಿ. ಜಿಲ್ಲೆಯಾದ್ಯಂತ 213 ನಿಯಂತ್ರಿತ ವಲಯಗಳಿವೆ. ಕೋವಿಡ್ ಆಸ್ಪತ್ರೆಯಲ್ಲಿ 56 ಮಂದಿ, ಕೋವಿಡ್ ಕೇರ್ ಸೆಂಟರ್ನಲ್ಲಿ 81 ಮಂದಿ ಹಾಗೂ ಹೋಂ ಐಸೋಲೇಶನ್ನಲ್ಲಿ 94 ಸೋಂಕಿತರು ದಾಖಲಾಗಿದ್ದಾರೆ.
ಹೊಸ ಪ್ರಕರಣಗಳ ವಿವರ
ವೀರಾಜಪೇಟೆ ತಾಲೂಕಿನ ವಿ.ಬಾಡಗದ 36 ವರ್ಷದ ಪುರುಷ, ವೀರಾಜಪೇಟೆ ತಾಲೂಕಿನ ನಾತಂಗಾಲದ 30 ವರ್ಷದ ಪುರುಷ, ವೀರಾಜಪೇಟೆಯ ಅರವತ್ತೊಕ್ಲುವಿನ 23 ವರ್ಷದ ಪುರುಷ, ಮಡಿಕೇರಿ ಕಾವೇರಿ ಲೇಔಟಿನ 24 ಮತ್ತು 22 ವರ್ಷದ ಪುರುಷ, ಬೆಳಗಾವಿಯ ಪೆÇಲೀಸ್ ಇಲಾಖೆಯ 22 ಮತ್ತು 23 ವರ್ಷದ ಪುರುಷರು, ಮಡಿಕೇರಿ ಆಜಾದ್ನಗರದ 21 ಮತ್ತು 23 ವರ್ಷದ ಪುರುಷರು, ಕುಶಾಲನಗರದ ಗಂಧದಕೋಟೆಯ 24 ವರ್ಷದ 2 ಪುರುಷರು, ಕೂಡಿಗೆಯ 45 ವರ್ಷದ ಮಹಿಳೆ, ಮಡಿಕೇರಿ ಮುತ್ತಪ್ಪ ದೇವಾಲಯ ಹಿಂಭಾಗದ 38 ವರ್ಷದ ಪುರುಷ, ವೀರಾಜಪೇಟೆಯ ಬೆಕ್ಕೆಸೊಡ್ಲೂರುವಿನ 75 ವರ್ಷದ ಮಹಿಳೆ, ಬೆಂಗಳೂರಿನ 43 ವರ್ಷದ ಪುರುಷ, ನಾಪೆÇೀಕ್ಲುವಿನ ಎಮ್ಮೆಮಾಡು ಬಳಿಯ 19 ವರ್ಷದ ಮಹಿಳೆ, ಮಡಿಕೇರಿ ಗದ್ದಿಗೆಯ 35 ವರ್ಷದ ಮಹಿಳೆ, ಮಡಿಕೇರಿಯ ಆಜಾದ್ ನಗರದ ಅಂಬೇಡ್ಕರ್ ಭವನ ಸಮೀಪದ 30 ವರ್ಷದ ಮಹಿಳೆ, ಗೋಣಿಕೊಪ್ಪದ ಕೆಇಬಿ ವಸತಿ ಗೃಹದ 40 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.