*ಸಿದ್ದಾಪುರ ಆ.9 : ಅತ್ತಿಮಂಗಲ- ಬರಡಿ ಗ್ರಾಮದಲ್ಲಿ ಸಂಚಾರಕ್ಕೆ ಅಡ್ಡಿಯಾಗಿರುವ ರಸ್ತೆಯ ಮೇಲಿನ ಬೇಲಿಯನ್ನು ಶಾಸಕ ಅಪ್ಪಚ್ಚುರಂಜನ್ ಅವರು ಇಂದು ಪರಿಶೀಲಿಸಿದರು. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಸಂಬಂಧಿಸಿದವರೊಂದಿಗೆ ಚರ್ಚಿಸಿ ಗ್ರಾಮಸ್ಥರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.

ಇದೇ ಸಂದರ್ಭ ಶಾಸಕರು ಕರಡಿಗೋಡು ಮಳೆಹಾನಿ ಸಂತ್ರಸ್ತರು ಆಶ್ರಯ ಪಡೆದಿರುವ ಸರ್ಕಾರಿ ಶಾಲೆಯಲ್ಲಿರುವ 60 ಕುಟುಂಬಗಳು ಮತ್ತು ಬಸವೇಶ್ವರ ಸಮುದಾಯ ಭವನದಲ್ಲಿರುವ 40 ಕುಟುಂಬಗಳನ್ನು ಭೇಟಿಯಾಗಿ ಧೈರ್ಯ ತುಂಬಿದರು. ಸರ್ಕಾರದ ನೆರವಿನ ಕುರಿತು ಭರವಸೆ ನೀಡಿದರು.

ಈ ಸಂದರ್ಭ ಪ್ರಮುಖರಾದ ವಿ.ಕೆ.ಲೋಕೇಶ್, ಹೊಸಮನೆ ವಸಂತ, ಮಣಿ ಮತ್ತಿತರರು ಹಾಜರಿದ್ದರು.