ಸೋಮವಾರಪೇಟೆ, ಆ. 9: ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್‍ನ ಅಧ್ಯಕ್ಷರಾಗಿ ಕವಿತಾ ವಿರೂಪಾಕ್ಷ, ಕಾರ್ಯದರ್ಶಿಯಾಗಿ ಸರಿತ ರಾಜೀವ್ ಆಯ್ಕೆಯಾದರು.
ಇಲ್ಲಿನ ಸಾಕ್ಷಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೈದ್ಯಾಧಿಕಾರಿ ಸುಪರ್ಣಾ ಕೃಷ್ಣಾನಂದ ಅವರು ಸ್ತನಪಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭ ಕೊರೊನಾ ಸೇನಾನಿಗಳಾದ ಆರೋಗ್ಯ ಇಲಾಖೆಯ ಸಿಬ್ಬಂದಿ ಶೋಭಾ ಮತ್ತು ಅನಿತಾ ಅವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಇನ್ನರ್ ವೀಲ್‍ನ ಉಪಾಧ್ಯಕ್ಷೆ ಆಶಾ ಯೋಗೇಂದ್ರ, ಖಜಾಂಚಿ ನಂದಿನಿ ಗೋಪಾಲ್, ಪದಾಧಿಕಾರಿಗಳಾದ ಸೌಮ್ಯ ಸತೀಶ್, ತನ್ಮಯಿ ಪ್ರವೀಣ್ ಉಪಸ್ಥಿತರಿದ್ದರು.