ಗೋಣಿಕೊಪ್ಪ ವರದಿ, ಆ. 9: ಬಲ್ಯಮುಂಡೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪರಿಹಾರ ಕೇಂದ್ರದ ಸಂತ್ರಸ್ತರ ಕೊರೊನಾ ಪರೀಕ್ಷೆ ನಡೆಸಿ ಗಂಟಲು ದ್ರವ ಸಂಗ್ರಹಿಸಲಾಯಿತು.
ಲಕ್ಷ್ಮಣತೀರ್ಥ ನದಿ, ಬೇಗೂರು ಕೊಲ್ಲಿ ಪ್ರವಾಹದಿಂದಾಗಿ 12 ಜನರನ್ನು ಶುಕ್ರವಾರ ಸ್ಥಳಾಂತರಿಸಲಾಗಿತ್ತು. ಆಶಾ ಕಾರ್ಯಕರ್ತರು, ಹಾಗೂ ದಾದಿಯರು, ಗ್ರಾಮ ಲೆಕ್ಕಾಧಿಕಾರಿ ಆಶಾ, ಬಲ್ಯಮುಂಡೂರು ಪಿಡಿಒ ರಾಜೇಶ್ ಕ್ರಮಕೈಗೊಂಡರು.