ಮಡಿಕೇರಿ, ಆ. 10: ಕೊಡವ ನ್ಯಾಷನಲ್ ಕೌನ್ಸಿಲ್ (ಸಿ. ಎನ್.ಸಿ.) ಆಶ್ರಯದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ‘ವಿಶ್ವ ಆದಿ ಸಂಜಾತ ಬುಡಕಟ್ಟು ಜನಾಂಗಗಳ ಹಕ್ಕುಗಳ ದಿನಾಚರಣೆ’ಯ ಹಿನ್ನೆಲೆ ಸತ್ಯಾಗ್ರಹ ನಡೆಯಿತು.
ಸಿ.ಎನ್.ಸಿ. ಅಧ್ಯಕ್ಷ ಎನ್. ಯು. ನಾಚಪ್ಪ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಯಿತು. ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿ, ಕೇಂದ್ರ ಗೃಹಮಂತ್ರಿ, ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಪ್ರಮುಖವಾಗಿ ಕೊಡವ ಭೂ-ರಾಜಕೀಯ ಆಶೋತ್ತರವಾದ ಸ್ವಯಂ ನಿರ್ಣಯ ಹಕ್ಕಿನ ಸ್ವಾಯತ್ತ ಕೊಡವ ಲ್ಯಾಂಡ್‍ಗೆ ಆಗ್ರಹಿಸಿರುವುದರೊಂದಿಗೆ, ಕೊಡವ ಗುಡಕಟ್ಟು ಕೆಲವನ್ನು ಸಂವಿಧಾನದ ವಿಧಿ 340/342 ವಿಧಿ ಪ್ರಕಾರ ಬುಡಕಟ್ಟು ಕುಲವೆಂದು ಪರಿಗಣಿಸುವಂತೆ, ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರ್ಪಡೆಗೊಳಿಸಬೇಕೆಂದು ಮತ್ತು ಅಲ್ಪ ಸಂಖ್ಯಾತ ಸಾಂಸ್ಕøತಿಕ ಕೊಡವ ಬುಡಕಟ್ಟು ಕುಲವನ್ನು ಯುನೆಸ್ಕೋದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಚ್ ಲಿಸ್ಟ್ (ಪಟ್ಟಿಯಲ್ಲಿ) ಸೇರಿಸಬೇಕೆಂದು ಒತ್ತಾಯಿಸಲಾಗಿದೆ. ಸತ್ಯಾಗ್ರಹದಲ್ಲಿ ಪುಲ್ಲೇರ ಕಾಳಪ್ಪ, ಮಣೋಟಿರ ಚಿಣ್ಣಪ್ಪ, ನಂದಿನೆರವಂಡ ವಿಜು, ಪುದಿಯೊಕ್ಕಡ ಕಾಶಿ, ಪುಟ್ಟಿಚಂಡ ಡಾನ್‍ದೇವಯ್ಯ ಮಂಡೇಪಂಡ ಮನೋಜ್, ಅಳಮಂಡ ಜೈ, ನಂದಿನೆರವಂಡ ಅಪ್ಪಯ್ಯ, ಮೇದುರ ಕಂಠಿ ನಾಣಯ್ಯ, ನಂದಿನೆರವಂಡ ಅಯ್ಯಣ್ಣ, ಬಾದುವಂಡ ವಿಜು ಮತ್ತಿತರರು ಭಾಗವಹಿಸಿದ್ದರು.