ಮಡಿಕೇರಿ, ಆ. 10: ಕಳೆದ 40 ವರ್ಷದಿಂದ ಬಿದ್ದೇರಿಯಂಡ ಕುಟುಂಬದ ಕೆಸರು ಗದ್ದೆಯ ನಾಟಿ ಓಟದ ಸ್ಪರ್ಧೆಯನ್ನು ನಡೆಸಿಕೊಂಡು ಬಂದಿರುತ್ತಾರೆ. ಅದರಂತೆ ಈ ವರ್ಷವು ಅಂದರೆ ತಾ. 4 ರಂದು ಬಿದ್ದೇರಿಯಂಡ ಸಾಬು ಕಾವೇರಪ್ಪ ಅವರ ಗದ್ದೆಯಲ್ಲಿ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ ಹಾಜರಿದ್ದು, ಬಿದ್ದೇರಿಯಂಡ ಸಾಬು ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ಓಟದ ಸ್ಪರ್ಧೆಯನ್ನು ಉದ್ಘಾಟಿಸಲಾಯಿತು. ನಾಲ್ಕು ವಿಭಾಗಗಳಾಗಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪ್ರಾಥಮಿಕ ವಿಭಾಗದಲ್ಲಿ ರಶೀನ್ (ಪ್ರ), ಕುಳ್ಳ (ದ್ವಿ), ರಫಾನ್ (ತೃ) ಸ್ಥಾನ ಪಡೆದರು. ಪ್ರೌಢ ವಿಭಾಗದಲ್ಲಿ ಬಿದ್ದೇರಿಯಂಡ ಅಪ್ಪಣ್ಣ (ಪ್ರ), ಅರ್ಪಿತ್ (ದ್ವಿ), ಬಿದ್ದೇರಿಯಂಡ ಮಾದಪ್ಪ (ತೃ) ಸ್ಥಾನ ಪಡೆದುಕೊಂಡರು.

30 ವರ್ಷ ಮೇಲ್ಪಟ್ಟವರಲ್ಲಿ ರಂಶೀದ್ ಪೊದ್ದಮಾನಿ (ಪ್ರ), ಅಣ್ಣಪ್ಪ (ದ್ವಿ), ಸಂಜು (ತೃ) ಸ್ಥಾನ ಗಳಿಸಿದರು. ಸಾರ್ವಜನಿಕ ವಿಭಾಗದಲ್ಲಿ ಸಂಜು (ಪ್ರ), ಬಿದ್ದೇರಿಯಂಡ ಅಪ್ಪಣ್ಣ (ದ್ವಿ), ಅಣ್ಣಪ್ಪ (ತೃ) ಸ್ಥಾನ ಗಳಿಸಿದರು.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಿದ್ದೇರಿಯಂಡ ಸಾಬು ಕಾವೇರಪ್ಪ ಮತ್ತು ನೆಲ್ಲಚಂಡ ಕಿರಣ್ ಕಾರ್ಯಪ್ಪ ಬಹುಮಾನ ವಿತರಿಸಿದರು. ಕಾರ್ಯಕ್ರಮವನ್ನು ಮಾದೆಯಂಡ ಸಂಪಿ ಪೂಣಚ್ಚ ನಿಯೋಜಿಸಿದ್ದರು.

ಕಾರ್ಯಕ್ರಮಕ್ಕೆ ಕುಶಿನ್ ಪಾಫರ ಮಾಲೀಕರಾದ ರಾಜೇಶ್ ಅಚ್ಚಯ್ಯ, ಅಶೋಕ್, ಈಶ ದೇವಯ್ಯ, ಶಂಕರಿ, ಶರಣು, ದಿನೇಶ್, ಸುಶೀಲ ಕಾವೇರಪ್ಪ, ವೀಣಾ ಅಶೋಕ್, ಭೂಮಿಕ, ಕಾವೇರಿ ಮುಂತಾದವರು ಹಾಜರಿದ್ದರು.