*ಸಿದ್ದಾಪುರ ಆ.10 : ಮಹಾಮಳೆಯಿಂದ ಚೆನ್ನಯ್ಯನಕೋಟೆ, ಚೆನ್ನಂಗಿ ಗ್ರಾಮದಲ್ಲಿ ನೂರಾರು ಎಕರೆ ಕಾಫಿ ತೋಟ ಮುಳುಗಡೆಯಾಗಿದೆ. ಮಳೆ ಕಡಿಮೆಯಾಗಿದ್ದರೂ ತೋಟಗಳಿಗೆ ನುಗ್ಗಿದ ಪ್ರವಾಹದ ನೀರು ಇನ್ನೂ ಕೂಡ ತಗ್ಗಿಲ್ಲ. ಸ್ಥಳೀಯ ಬೆಳೆಗಾರ ದೇವಜನ ಪೂಣಚ್ಚ ಅವರ ತೋಟ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಕಾಫಿ ಮತ್ತು ಕರಿಮೆಣಸು ಬೆಳೆಗೆ ಹಾನಿಯಾಗಿದೆ. ಕಾಫಿ ಉದುರಿದ್ದು, ಮೆಣಸು ಬಳ್ಳಿ ನಾಶವಾಗಿದೆ. ನೀರು ತಗ್ಗದೆ ಇರುವುದರಿಂದ ಮತ್ತಷ್ಟು ಗಿಡಗಳು ಕೊಳೆತು ಹೋಗುವ ಸಾಧ್ಯತೆಗಳಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸಂಬಂಧಿಸಿದ ಇಲಾಖೆ ಸೂಕ್ತ ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.