ಕರಿಕೆ, ಆ. 9: ಕೊಡಗಿನ ಗಡಿ ಗ್ರಾಮ ಕರಿಕೆಯಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಗಡಿ ಪ್ರದೇಶದ ಚೆಂಬೇರಿಯಲ್ಲಿ ಕೊಡಗು ಜಿಲ್ಲಾಡಳಿತದ ವತಿಯಿಂದ ಹಾಕಿದ್ದ ಮಣ್ಣನ್ನು ಶಾಸಕ ಕೆ.ಜಿ. ಬೋಪಯ್ಯ ಸೂಚನೆ ಮೆರೆಗೆ ತೆರವುಗೊಳಿಸಲಾಯಿತು. ಕಳೆದ ಮಾರ್ಚ್ ತಿಂಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಗಡಿ ಬಂದ್ ಮಾಡಲಾಗಿತ್ತು. ಇದೀಗ ತೀವ್ರ ಮಳೆಯಾದ ಕಾರಣ ಗ್ರಾಮಸ್ಥರು ಚಿಕಿತ್ಸೆಗೆ ಭಾಗಮಂಡಲ- ಮಡಿಕೇರಿಗೆ ತೆರಳಲು ಕಷ್ಟಕರವಾದ ಸನ್ನಿವೇಶ ಎದುರಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿಕೊಂಡ ಕಾರಣ ಶಾಸಕರು ಗಡಿ ತೆರವಿಗೆ ಸಂಬಂಧಿಸಿದವರಿಗೆ ಸೂಚಿಸಿದ್ದು, ಮಣ್ಣು ತೆರವು ಮಾಡಲಾಯಿತು. ಆದರೆ ಕೇರಳ ಪೆÇಲೀಸರು ಬ್ಯಾರಿಕೇಡ್ ಅಳವಡಿಸಿದ್ದು, ತುರ್ತು ವೈದ್ಯಕೀಯ ಸೇವೆ ಸೇರಿದಂತೆ ಇತರ ಅಗತ್ಯ ಸೇವೆಗೆ ಮಾತ್ರ ಕೇರಳಕ್ಕೆ ಬಿಡುತ್ತಿದ್ದು, ಯಾವುದೇ ವಾಹನ ಕೇರಳ - ಕರ್ನಾಟಕ ನಡುವೆ ಸಂಚರಿಸುತ್ತಿಲ್ಲ. ಕೊಡಗು ಜಿಲ್ಲಾಡಳಿತ ಕೂಡ ಕೊರೊನಾ ಹಿನೆÀ್ನಲೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ಹೊರಗಿನ ವಾಹನ, ವ್ಯಕ್ತಿಗಳ ಸಂಚಾರ ನಿಷೇಧಿಸಿ ಸ್ಥಳೀಯರಿಗೆ ಮಾತ್ರ ಅವಕಾಶ ಕಲ್ಪಿಸಲು ಗ್ರಾಮಸ್ಥರು ಕೋರಿದ್ದಾರೆ.