ಗೋಣಿಕೊಪ್ಪ ವರದಿ, ಆ. 9: ಕೊರೊನಾದಿಂದಾಗಿ ಸ್ವಾತಂತ್ರ್ಯೋತ್ಸವ ದಿನದಂದು ನಡೆಸಲಾಗುತ್ತಿದ್ದ ಸ್ಪಿರಿಟ್ ಆಫ್ ಫ್ರೀಡಂ ರನ್ ರಸ್ತೆ ಓಟವನ್ನು ಮುಂದೂಡಲಾಗಿದೆ. ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ 45 ವರ್ಷದಿಂದ ನಡೆಸಿಕೊಂಡು ಬರುತ್ತಿದ್ದ ಪೊನ್ನಂಪೇಟೆ-ಗೋಣಿಕೊಪ್ಪ ರಸ್ತೆ ಓಟವನ್ನು ದಿನಾಂಕ ನಿರ್ಧರಿಸದೆ ಮುಂದೂಡಲಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಅಚ್ಚಯ್ಯ, ಕಾರ್ಯದರ್ಶಿ ಪುತ್ತಾಮನೆ ಸ್ಮರಣ್ ಶುಭಾಶ್ ತಿಳಿಸಿದ್ದಾರೆ.