ಮಡಿಕೇರಿ, ಆ. 7: 2020-21ನೇ ಸಾಲಿನ ಆತ್ಮ ಯೋಜನೆಯಡಿ ಸಾಧಕ ರೈತರನ್ನು ಗುರುತಿಸಿ ‘ಶ್ರೇಷ್ಠ ಕೃಷಿಕ’ ಪ್ರಶಸ್ತಿಯನ್ನು ನೀಡುವ ಸಲುವಾಗಿ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ನಮೂನೆಯು ಸಹಾಯಕ ಕೃಷಿ ನಿರ್ದೇಶಕರು, ಮಡಿಕೇರಿ ತಾಲೂಕು ಕಚೇರಿ ಹಾಗೂ ಎಲ್ಲಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ತಾ. 10 ರಿಂದ ಲಭ್ಯವಿದ್ದು, ಆಸಕ್ತ ರೈತರು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಕಚೇರಿಗಳಿಗೆ ನವೆಂಬರ್ 1 ರೊಳಗಾಗಿ ಸಲ್ಲಿಸಬೇಕಾಗಿದೆ ಎಂದು ಮಡಿಕೇರಿ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.