ಮಡಿಕೇರಿ, ಆ. 7: 2020-21ನೇ ಸಾಲಿನ ಡಿ.ಇಎಲ್.ಇಡಿ ದಾಖಲಾತಿ ಸಂಬಂಧವಾಗಿ ಸರ್ಕಾರಿ ಕೋಟಾದ ಸೀಟುಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ದಿನಾಂಕ : 05-08-2020 ರಿಂದ 30-08-2020ರವರೆಗೆ ಅರ್ಜಿ ಅಹ್ವಾನಿಸಲಾಗಿದೆ. ಈ ಸಂಬಂಧವಾಗಿ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿ ಆಸಕ್ತ ಅಭ್ಯರ್ಥಿಗಳು, ಅದರಲ್ಲಿ ಸಾಮಾನ್ಯ ಅಭ್ಯರ್ಥಿಗಳು ಶೇ50%, ಪ.ಜಾತಿ ಹಾಗೂ ಪ.ಪಂಗಡದ ವಿದ್ಯಾರ್ಥಿಗಳು ಶೇ45% ಅಂಕ ಪಡೆದಿರಬೇಕು.
ಇತರ ಸೂಚನೆಗಳನ್ನು ವೆಬ್‍ಸೈಟ್ ತಿತಿತಿ. sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ನಲ್ಲಿ ಪ್ರಕಟಿಸಲಾಗಿದೆ. ವೆಬ್‍ಸೈಟ್‍ನಲ್ಲಿನ ಮಾಹಿತಿಗಳನ್ನು ಕಡ್ಡಾಯವಾಗಿ ಓದಿಕೊಂಡು ಅರ್ಜಿಗಳನ್ನು ಕ್ರಮವಾಗಿ ಭರ್ತಿ ಮಾಡುವುದು. ಭರ್ತಿ ಮಾಡಿದ ಅರ್ಜಿಗಳನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಡಯಟ್ ಕೂಡಿಗೆಯನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ:
08276-278287