ಬಾಳೆಲೆ: 144 ಸೆಕ್ಷನ್ ಹಿನ್ನೆಲೆ ಕೆಲವು ಪ್ರಮುಖರು ಮಾತ್ರ ಬಾಳೆಲೆ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತೆರಳಿದರು. ಅಯೋಧ್ಯೆಗೆ ಕರಸೇವಕರಾಗಿ ತೆರಳಿದ್ದ ಅಳಮೇಂಗಡ ಬೋಸ್ ಮಂದಣ್ಣ, ಪೆÇಡಮಾಡ ಉತ್ತಪ್ಪ ಸೇರಿದಂತೆ ಪ್ರಮುಖರಾದ ಅರಮಣಮಾಡ ರಂಜನ್ ಚಂಗಪ್ಪ, ಮೇಚಂಡ ಸೋಮಯ್ಯ, ಚಕ್ಕೇರ ಅಯ್ಯಪ್ಪ, ಅಡ್ಡೇಂಗಡ ರಾಖಿ ಮುಂತಾದವರು ಆಗಮಿಸಿ ಪೂಜೆ ಸಲ್ಲಿಸಿ ತೆರಳಿದರು. ಬೋಸ್ ಮಂದಣ್ಣ ಮಾತನಾಡಿ, ನಾವು ಅಯೋಧ್ಯೆ ರಾಮಮಂದಿರ ಶಿಲಾನ್ಯಾಸ ಕಣ್ಣು ತುಂಬಿಕೊಳ್ಳುವ ಅವಕಾಶ ಸಿಕ್ಕಿರುವುದು ನಮಗೆ ಸಿಕ್ಕ ಭಾಗ್ಯವಾಗಿದೆ. ರಾಮ ಮಂದಿರ ನಿರ್ಮಾಣ ಭಾರತದ ಪ್ರತಿಯೊಬ್ಬರ ಹೆಮ್ಮೆ. ಶಾಂತಿಯಿಂದ ನಾವೆಲ್ಲರೂ ಅದನ್ನು ಸ್ವೀಕರಿಸೋಣ ಎಂದರು.

ಗೋಣಿಕೊಪ್ಪ ವರದಿ: ರಾಮ ಮಂದಿರ ನಿರ್ಮಾಣ ಹಿನ್ನೆಲೆ ದಕ್ಷಿಣ ಕೊಡಗಿನ ಬಹುತೇಕ ಗ್ರಾಮಗಳ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಬಿ. ಶೆಟ್ಟಿಗೇರಿ ಮಹದೇವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಬಲ್ಲಡಿಚಂಡ ವಿಜು, ಕಾರ್ಯಕರ್ತರಾದ ನಾಮೇರ ದಾದಾ, ತೀತಿಮಾಡ ಲಾಲಾ ಭೀಮಯ್ಯ, ಇತರರು ಇದ್ದರು. ಹುದಿಕೇರಿ ರಾಮ ಮಂದಿರದಲ್ಲಿ ಗ್ರಾಮಸ್ಥರಿಂದ ಪೂಜೆ ನಡೆಯಿತು. ರಾಮ ಮಂದಿರ ನಿರ್ಮಾಣ ನಿರ್ವಿಘ್ನವಾಗಿ ನಡೆಯಲಿ ಎಂದು ಪ್ರಾರ್ಥಿಸಿದರು. ಮಾಯಮುಡಿಯಲ್ಲಿರುವ ರಾಮ ಮಂದಿರದಲ್ಲಿ ದೀಪ ಬೆಳಗಿಸುವ ಮೂಲಕ ಪ್ರಾರ್ಥಿಸಲಾಯಿತು. ಚೆಪ್ಪುಡೀರ ಪ್ರದೀಪ್, ವೇಣು ಇತರರಿದ್ದರು.

ಗೋಣಿಕೊಪ್ಪ ಪಟ್ಟಣದಲ್ಲಿರುವ ಹಿಂದೂ ಧ್ವಜಕ್ಕೆ ಪೂಜೆ ಸಲ್ಲಿಸಲಾಯಿತು. ಕೈಕೇರಿ ಭಗವತಿ ದೇವಸ್ಥಾನದಲ್ಲಿ ಪೂಜೆ ನಡೆಯಿತು. ಅತ್ತೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ನಡೆಸಲಾಯಿತು.

ಉಮಾಮಹೇಶ್ವರಿ ದೇವಸ್ಥಾನದಲ್ಲಿ 9 ಕರಸೇವಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಪ್ರಮುಖರಾದ ಚೆಕ್ಕೇರ ಮನು, ಈರಪ್ಪ, ಸಿ.ಕೆ. ಬೋಪಣ್ಣ, ಜಪ್ಪು ಸುಬ್ಬಯ್ಯ ಇದ್ದರು.

ಪೆರಾಜೆ: ಪೆರಾಜೆಯ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಅಯೋಧ್ಯೆಯ ಭವ್ಯ ಶ್ರೀ ರಾಮಮಂದಿರ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದ ಪ್ರಯುಕ್ತ ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಸರಳವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಮತ್ತು 1990ರ ದಶಕದಲ್ಲಿ ಅಯೋಧ್ಯೆಗೆ ತೆರಳಿದ ಗ್ರಾಮದ ಕರಸೇವಕರಿಗೆ ಸನ್ಮಾನ ಕಾರ್ಯಕ್ರಮಗಳು ನಡೆದವು.

ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆ ಇದರ ಮೂಕ್ತೇಸರರಾದ ಕುಂಬಳಚೇರಿ ವಿಶ್ವನಾಥ ನಂದಾದೀಪ ಬೆಳಗಿಸಿದ ಕಾರ್ಯಕ್ರಮದಲ್ಲಿ ಪೆರಾಜೆ ಗ್ರಾಮದಿಂದ ಅಯೋಧ್ಯೆ ಕರಸೇವೆಗೆ ತೆರಳಿದ ಜತ್ತನಮನೆ ಕೃಷ್ಣಪ್ಪ, ಲೋಕನಾಥ್ ಅಮೆಚೂರ್, ಕುಂದಲ್ಪಾಡಿ ಕೇಶವ ಇವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯ ಹಾಗೂ ಕೊಡಗು ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಊರಿನ ಜನಪ್ರತಿನಿಧಿಗಳು, ಹಿರಿಯ ನಾಯಕರು, ಸಂಘ ಪರಿವಾರದ ಕಾರ್ಯಕರ್ತರು, ರಾಮ ಭಕ್ತರು ಸೇರಿದಂತೆ ಹಲವಾರು ಮಂದಿ ಸಾಮಾಜಿಕ ಅಂತರ ಕಾಯ್ದುಕೊಂಡು ಭಾಗವಹಿಸಿದ್ದರು.

ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕ ಜಯರಾಮ ಪಿ.ಪಿ. ಪ್ರಾರ್ಥಿಸಿ, ಶಕ್ತಿ ಕೇಂದ್ರದ ಅಧ್ಯಕ್ಷ ನಂಜಪ್ಪ ನಿಡ್ಯಮಲೆ ಸ್ವಾಗತಿಸಿ, ಮಡಿಕೇರಿ ತಾಲೂಕು ಭಾ.ಜ.ಪ. ದ ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ ನಿರೂಪಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಪೆರಾಜೆ ವಿಶ್ವ ಹಿಂದೂ ಪರಿಷತ್‍ನ ಅಧ್ಯಕ್ಷ ಮಹೇಶ್ ಮೂಲೆಮಜಲು ವಂದಿಸಿದರು.ಮಡಿಕೇರಿ: 1992 ರ ಡಿಸೆಂಬರ್ 6 ರಂದು ಕರಸೇವೆಯಲ್ಲಿ ಭಾಗವಹಿಸಿದ್ದ ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್ ಅವರ ಕಾರ್ಯವನ್ನು ಶ್ಲಾಘಿಸಿ ಸನ್ಮಾನ ಮಾಡಲಾಯಿತು.

ಈ ಸಂದರ್ಭ ನಗರ ಖಜಾಂಚಿ ಎಸ್. ಮುರುಗನ್, ಪುಟಾಣಿನಗರ ವಾರ್ಡ್ ಅಧ್ಯಕ್ಷ ವೇಣುಗೋಪಾಲ್, ಸದಸ್ಯರಾದ ಅಪ್ಪು ಮೋಹನ್, ಎಸ್. ಕುಮಾರ, ಎಸ್. ಕಣ್ಣನ್ ಹಾಗೂ ಅಶೋಕ್ ಇದ್ದರು.

ಕುಶಾಲನಗರ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಹಿನ್ನೆಲೆ ಕುಶಾಲನಗರದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.

ಶ್ರೀ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಾರ್ಯಕರ್ತರು ಮತ್ತು ಪ್ರಮುಖರು ಶ್ರೀರಾಮನ ಬೃಹತ್ ಕಟೌಟ್‍ಗೆ ಪೂಜೆ ಸಲ್ಲಿಸಿ ಆರತಿ ಬೆಳಗಿ ಪುಷ್ಪಾರ್ಚನೆ ಅರ್ಪಿಸಿದರು. ಈ ಸಂದರ್ಭ 1990ರಲ್ಲಿ ಕುಶಾಲನಗರದಿಂದ ಅಯೋಧ್ಯೆಗೆ ಕರಸೇವೆಗೆ ತೆರಳಿದ ಸ್ಥಳೀಯ ಕಾರ್ಯಕರ್ತರನ್ನು ಗೌರವಿಸಲಾಯಿತು.

ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರಾದ ಜಿ.ಎಲ್. ನಾಗರಾಜ್, ಅಮೃತ್‍ರಾಜ್, ರಾಜೀವ, ಅನೀಶ್, ಕೆ.ಪಿ. ಚಂದ್ರಶೇಖರ್, ನವನೀತ್, ಉಮಾಶಂಕರ್, ಜಿ.ಪಂ. ಸದಸ್ಯೆ ಮಂಜುಳಾ ಮತ್ತಿತರರು ಇದ್ದರು.

ಚೆಟ್ಟಳ್ಳಿ: ಚೆಟ್ಟಳ್ಳಿ-ಶ್ರೀಮಂಗಲ ಭಗವತಿ ದೇವಸ್ಥಾನದಲ್ಲಿ ಹಿಂದೂ ಜಾಗರಣ ವೇದಿಕೆ ಚೆಟ್ಟಳ್ಳಿ ಇವರ ವತಿಯಿಂದ ಸಂಕಲ್ಪ ಪೂಜೆಯನ್ನು ನೆರವೇರಿಸಲಾಯಿತು. ಮೊದಲಿಗೆ ಗಣಪತಿ ಪೂಜೆ ನೆರೆವೇರಿಸಿ, ನಂತರ ಭಗವತಿ ದೇವಿಗೆ ಪೂಜೆ ಸಲ್ಲಿಸಲಾಯಿತು. ನಂತರ ಕಾರ್ಯಕ್ರಮಕ್ಕೆ ಬಂದ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.

ಹಿಂದೂ ಜಾಗರಣ ವೇದಿಕೆಯ ಬಟ್ಟೀರಾ ನಾಚಪ್ಪ, ಚೇತನ್, ಕಾರ್ಯದರ್ಶಿ ಅಂಜನ್ ಮುತ್ತಪ್ಪ, ಬಟ್ಟೀರಾ ವೇಣು, ಪುತ್ತರಿರ ನವೀನ್ ಬಿದ್ದಪ್ಪ, ಕೆದಂಬಾಡಿ ಪುರುಷೋತ್ತಮ್, ಐಯ್ಯಂದ್ರ ಯತೀಶ್, ನಂದಕುಮಾರ್, ಕೆಚ್ಚೆಟ್ಟಿ ಮುತ್ತಣ್ಣ, ಪಳಂಗಂಡ ಶಾಮ್ ಕಾಳಪ್ಪ, ಜಾಗರಣ ವೇದಿಕೆಯ ಕಾರ್ಯಕರ್ತರು ಹಾಜರಿದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ವಿಶ್ವ ಹಿಂದೂ ಪರಿಷತ್, ಆರ್‍ಎಸ್‍ಎಸ್, ಭಜರಂಗದಳದ ವತಿಯಿಂದ ಶ್ರೀ ಕೋದಂಡ ರಾಮ ಮಂದಿರದಲ್ಲಿ ವಿಶೇಷ ಭೂಮಿಪೂಜೆ ಹಾಗೂ ಭಜನೆಯನ್ನು ನಡೆಸಲಾಯಿತು.

ದೇವಾಲಯದ ಅರ್ಚಕರಾದ ದರ್ಶನ್ ರಾಮನಿಗೆ ಮಹಾಮಂಗಳಾರತಿ ನಡೆಸಿದರು. ಈ ಸಂದರ್ಭ 1992 ರಲ್ಲಿ ಅಯೋಧ್ಯೆಯಲ್ಲಿ ಕರಸೇವೆಗೆ ತೆರಳಿದ್ದ ಎಂ.ಎನ್. ಕೊಮರಪ್ಪ, ಚೆನ್ನಬಸಪ್ಪ, ಪಟ್ಟೆಮನೆ ಕೆ. ಶೇಷಪ್ಪ, ಲಿಂಗರಾಜಪ್ಪ, ವೈ.ಡಿ. ಈರಪ್ಪ, ಹೊಸಮನೆ ತಮ್ಮಪ್ಪ, ಬಿ.ಕೆ. ವಿಶ್ವನಾಥ ರೈ ಹಾಗೂ 42 ವರ್ಷಗಳ ಕಾಲ ಶ್ರೀ ಕೋದಂಡ ರಾಮ ಮಂದಿರದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಗಣೇಶ್ ಶರ್ಮ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭ ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ, ನಗರ ಬಿಜೆಪಿ ಅಧ್ಯಕ್ಷ ಪಿ.ಆರ್. ಸುನಿಲ್‍ಕುಮಾರ್ ಆರ್. ಶಾಂತರಾಂ ಕಾಮತ್, ದಾಸಂಡ ರಮೇಶ್ ಚಂಗಪ್ಪ, ಹಿರಿಯರಾದ ಪಿ.ಕೆ. ಮುತ್ತಣ್ಣ, ಗೌರಿ ಗಣೇಶ ಆಚರಣಾ ಸಮಿತಿ ಅಧ್ಯಕ್ಷ ಧನು ಕಾವೇರಪ್ಪ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಎ. ಶ್ರೀಧರ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಕೆ. ಪ್ರಶಾಂತ್, ಭಜರಂಗದಳ ಅಧ್ಯಕ್ಷ ವಿಘ್ನೇಶ್, ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ, ಸುದೀಶ್ ಹಾಗೂ ಭಕ್ತಾದಿಗಳು ಹಾಜರಿದ್ದರು.

ಕರಿಕೆ: ಪವಿತ್ರ ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಡೆದ ಭೂಮಿಪೂಜೆ ಕಾರ್ಯಕ್ರಮದ ಪ್ರಯುಕ್ತ ಗ್ರಾಮದಲ್ಲಿ ಸಂಘ ಪರಿವಾರದ ವತಿಯಿಂದ ಸಂಭ್ರಮಾಚರಣೆ ನಡೆಯಿತು. ಪವಿತ್ರ ಕೇಸರಿ ಭಗವಾಧ್ವಜವನ್ನು ಹಾರಿಸಿ ನಂತರ ಗ್ರಾಮದ ವನಶಾಸ್ತಾವು ದೇವಾಲಯದ ಆವರಣದಲ್ಲಿ 1992 ರಲ್ಲಿ ಅಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ ಪಾಲ್ಗೊಂಡ ಕರಿಕೆಯ ಸ್ವಯಂಸೇವಕ ರಾಘವ ಸರಳಾಯ ಅವರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಅವರಿಂದ ಸಂಪಿಗೆ ಗಿಡವನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಆರ್‍ಎಸ್‍ಎಸ್ ಪ್ರಮುಖರಾದ ಹೊದ್ದೆಟ್ಟಿ ಸುಧೀರ್ ಕುಮಾರ್, ಬಿ.ಎ. ಗಣೇಶ್, ಕುದುಪಜೆ ಗಣೇಶ್, ಶಿವಪ್ಪ, ಭಾ.ಜ.ಪ. ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ಹೊಸಮನೆ, ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ಇತರ ಪ್ರಮುಖರಾದ ಶೇಷಪ್ಪ, ರಮೇಶ್, ಬಾಲಕೃಷ್ಣ, ಶಂಕರ ಸರಳಾಯ, ದಯಾನಂದ ಬಿ.ಕೆ. ಮಧು ಚೆಂಬೇರಿ, ಅತ್ತಿಕಾಯ ರಾಮಚಂದ್ರ ಹಾಗೂ ಇತರ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕೂಡಿಗೆ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ: ಕೂಡಿಗೆಯ ಹಿಂದೂಪರ ಸಂಘಟನೆ ನೇತೃತ್ವದಲ್ಲಿ ಅಯೋಧ್ಯೆಯ ಭವ್ಯ ಶ್ರೀ ರಾಮ ಮಂದಿರ ನಿರ್ಮಾಣದ ಭೂಮಿಪೂಜೆ ಕಾರ್ಯ ನಿಮಿತ್ತ ಕೂಡಿಗೆ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಸರಳವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಮತ್ತು ಜ್ಯೋತಿ ಬೆಳಗುವ ಕಾರ್ಯಕ್ರಮ ನಡೆಯಿತು. ಅಯೋಧ್ಯೆ ಕರಸೇವಕರಾದ ನಾಲ್ಕು ಮಂದಿಗೆ ಸನ್ಮಾನಿಸಲಾಯಿತು. ಈ ಸಂದರ್ಭ ತಾಲೂಕು ಬಿಜೆಪಿ ಉಪಾಧ್ಯಕ್ಷ ಕೆ. ವರದ, ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್, ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಕೆ. ಭೋಗಪ್ಪ ಹಾಗೂ ಇತರರು ಹಾಜರಿದ್ದರು.ಸೋಮವಾರಪೇಟೆ ರಾಮಮಂದಿರದಲ್ಲಿ: ಇಲ್ಲಿನ ಶ್ರೀ ರಾಮ ಮಂದಿರದಲ್ಲಿ ಬಿಜೆಪಿ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ವಿಶೇಷ ಪೂಜೆ ಸಲ್ಲಿಸಿದರು. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಆದಷ್ಟು ಬೇಗ ಪೂರ್ಣಗೊಳ್ಳಲಿ ಎಂದು ಪ್ರಾರ್ಥನೆ ಮಾಡಲಾಯಿತು.

ಪಕ್ಷದ ಪ್ರಮುಖರಾದ ಕಿಬ್ಬೆಟ್ಟ ಮಧು, ಜೀವನ್, ಜಗನ್ನಾಥ್, ಸುಮಾ ಸುದೀಪ್, ಉಷಾ ತೇಜಸ್ವಿ, ಲೀಲಾ ನಿರ್ವಾಣಿ, ತಾ.ಪಂ. ಸದಸ್ಯೆ ತಂಗಮ್ಮ, ಪ.ಪಂ. ಸದಸ್ಯರಾದ ನಳಿನಿಗಣೇಶ್, ಪಿ.ಕೆ. ಚಂದ್ರು, ಶುಭಕರ್, ನಾಮನಿರ್ದೇಶನ ಸದಸ್ಯ ಶರತ್‍ಚಂದ್ರ, ಗ್ರಾ.ಪಂ. ಸದಸ್ಯೆ ಮಂಜುಳಾ ಸುಬ್ರಮಣಿ, ಪ್ರಮುಖರಾದ ಮೃತ್ಯುಂಜಯ, ಟಿ.ಕೆ. ರಮೇಶ್, ಶ್ರೀಕಾಂತ್, ರಾಮ್‍ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸೋಮವಾರಪೇಟೆ ರಾಮಮಂದಿರದಲ್ಲಿ: ಇಲ್ಲಿನ ಶ್ರೀ ರಾಮ ಮಂದಿರದಲ್ಲಿ ಬಿಜೆಪಿ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ವಿಶೇಷ ಪೂಜೆ ಸಲ್ಲಿಸಿದರು. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಆದಷ್ಟು ಬೇಗ ಪೂರ್ಣಗೊಳ್ಳಲಿ ಎಂದು ಪ್ರಾರ್ಥನೆ ಮಾಡಲಾಯಿತು.

ಪಕ್ಷದ ಪ್ರಮುಖರಾದ ಕಿಬ್ಬೆಟ್ಟ ಮಧು, ಜೀವನ್, ಜಗನ್ನಾಥ್, ಸುಮಾ ಸುದೀಪ್, ಉಷಾ ತೇಜಸ್ವಿ, ಲೀಲಾ ನಿರ್ವಾಣಿ, ತಾ.ಪಂ. ಸದಸ್ಯೆ ತಂಗಮ್ಮ, ಪ.ಪಂ. ಸದಸ್ಯರಾದ ನಳಿನಿಗಣೇಶ್, ಪಿ.ಕೆ. ಚಂದ್ರು, ಶುಭಕರ್, ನಾಮನಿರ್ದೇಶನ ಸದಸ್ಯ ಶರತ್‍ಚಂದ್ರ, ಗ್ರಾ.ಪಂ. ಸದಸ್ಯೆ ಮಂಜುಳಾ ಸುಬ್ರಮಣಿ, ಪ್ರಮುಖರಾದ ಮೃತ್ಯುಂಜಯ, ಟಿ.ಕೆ. ರಮೇಶ್, ಶ್ರೀಕಾಂತ್, ರಾಮ್‍ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು. ಅತ್ತೂರುವಿನ ದುರ್ಗಾ ಪರಮೇಶ್ವರಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಕುಪ್ಪಂಡ ಪಟ್ಟು ಕಾರ್ಯಪ್ಪ, ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯ ರಾಮಕೃಷ್ಣ, ತಾ.ಪಂ. ಸದಸ್ಯ ಜಯ ಪೂವಯ್ಯ, ಮುರುಗೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ನಾಪೋಕ್ಲು: ನಾಪೆÇೀಕ್ಲು ಕೊಡವ ಸಮಾಜದ ಆಡಳಿತ ಮಂಡಳಿಯಿಂದ ವಿಶೇಷ ಪ್ರಾರ್ಥನೆ ಮತ್ತು ಶೀಘ್ರವಾಗಿ ಮಂದಿರ ನಿರ್ಮಾಣವಾಗಲೆಂದು ಆಡಳಿತ ಮಂಡಳಿ ಅಧ್ಯಕ್ಷ ಕೆ.ಎ. ಮನು ಮುತ್ತಪ್ಪ ಅವರ ಮುಂದಾಳತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಪಾಲಿಬೆಟ್ಟ: ಯಾವುದೇ ತೊಂದರೆಗಳಿಲ್ಲದೆ ಆದಷ್ಟು ಬೇಗ ರಾಮ ಮಂದಿರ ನಿರ್ಮಾಣವಾಗಲೆಂದು ಪಾಲಿಬೆಟ್ಟದ ಗಣಪತಿ ದೇವಸ್ಥಾನದಲ್ಲಿ ರಾಮ ಭಕ್ತರು ಪೂಜೆ ಸಲ್ಲಿಸಿದರು.

1991ರಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕರಸೇವೆಗೆ ತೆರಳಿದ ವಿಜು ಸುಬ್ರಮಣಿ, ಸೋಮೆಯಂಡ ನಂದಾ, ಪಟ್ಟಡ ಗಿರಿ ಮತ್ತು ಬಾಲಕೃಷ್ಣ ಅವರಿಗೆ ಈ ಸಂದರ್ಭ ಭಕ್ತರುಗಳು ಅಭಿನಂದನೆ ಸಲ್ಲಿಸಿದರು. ಪೂಜೆಯ ಸಂದರ್ಭ ಪ್ರಮುಖರುಗಳಾದ ವಿಜು ಸುಬ್ರಮಣಿ, ಅಜಿತ್ ಕರುಂಬಯ್ಯ, ದೀಪಕ್ ಗಣಪತಿ, ಸೋಮೆಯಂಡ ನಂದಾ, ಮಾಳೇಟಿರ ಪವಿತ್ರ, ಟಿ.ಜಿ. ವಿಜೇಶ್, ಬಿ.ಬಿ. ಶಂಕರ, ಕೆ.ಟಿ. ಆನಂದ, ಪಿ.ಡಿ. ಸುನಿಲ್, ಮನೋಜ್ ಬಂಡೆ, ಕುಟ್ಟಂಡ ಮದನ್ ಮತ್ತಿತರರು ಹಾಜರಿದ್ದರು.

ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ: ಇಲ್ಲಿಗೆ ಸಮೀಪ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಹಂತದ ಭೂಮಿಪೂಜೆಯ ಕಾರ್ಯಕ್ರಮದ ನಿಮಿತ್ತವಾಗಿ ದೇವಾಲಯ ಸಮಿತಿಯ ವತಿಯಿಂದ ಶ್ರೀ ರಾಮ ದೇವರಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಮತ್ತು ಕಾವೇರಿ ನದಿಗೆ ಮೊದಲು ಗಂಗೆ ಪೂಜಾ ಕಾರ್ಯಕ್ರಮ ನೆಡೆಯಿತು. ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು

ಈ ಸಂದರ್ಭ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎನ್. ಸುರೇಶ್, ಕಾರ್ಯಾಧ್ಯಕ್ಷ ಕೆ.ಎಸ್. ಮಾಧವ, ಉಪಾಧ್ಯಕ್ಷ ಕೆ.ಕೆ. ಮಂಜುನಾಥ ಸ್ವಾಮಿ, ಕಾರ್ಯದರ್ಶಿ ಶೇಷಾಚಲ ಸೇರಿದಂತೆ ಸಮಿತಿಯ ಮಾಜಿ ಅಧ್ಯಕ್ಷ ಗಣೇಶ್, ಸುಬ್ರಾಯ ಸೇರಿದಂತೆ ಸಮಿತಿಯ ನಿರ್ದೇಶಕರು, ಗ್ರಾಮದ ಹಿರಿಯ ಮುಖಂಡರು ಭಾಗವಹಿಸಿದ್ದರು.