ಕಣಿವೆ, ಆ. 2 : ಸೋಮವಾರಪೇಟೆ ಏತನೀರಾವರಿ ಯೋಜನೆಯ ಕಾಲುವೆಯಲ್ಲಿ ತುಂಬಿರುವ ಹೂಳು ತೆಗೆದು ಕಾಡು ಗಿಡಗಳನ್ನು ತೆರವು ಮಾಡಲು ಗುತ್ತಿಗೆದಾರರು ಇಟಾಚಿ ಯಂತ್ರ ಬಳಸುತ್ತಿರುವುದರಿಂದ ಕಾಲುವೆಯ ಎರಡು ಗೋಡೆಗಳ ಕಾಂಕ್ರೀಟ್ ಹಾಗೂ ತಳದಲ್ಲಿ ಅಳವಡಿಸಿರುವ ಕಾಂಕ್ರೀಟ್ ಕಿತ್ತುಬರುತ್ತಿದೆ. ನೀರಿನ ಸರಾಗ ಹರಿವಿಕೆ ತೊಂದರೆಯಾಗಲಿದೆ ಎಂದು ರೈತರು ದೂರಿದ್ದಾರೆ.
ಮಾನವ ಶಕ್ತಿಯನ್ನು ಬಳಸಿ ಕಾಲುವೆಯ ಕಾಂಕ್ರಿಟ್‍ಗೆ ಧಕ್ಕೆಯಾಗದಂತೆ ಕಾಡು ಗಿಡಗಳನ್ನು ಕಡಿದು ಹೂಳು ತೆರವು ಮಾಡಬೇಕೆಂದು ಹಳಗೋಟೆ ರೈತರಾದ ದೇವರಾಜು, ನಾಗರಾಜು, ಈರಯ್ಯ, ಜವರಪ್ಪ ಮೊದಲಾದವರು ದೂರಿಕೊಂಡಿದ್ದಾರೆ. ನಮ್ಮ ಜಮೀನುಗಳಿಗೆ ನೀರು ಸರಾಗವಾಗಿ ಹರಿಸಲು ಬೇಕಾದ ಅಗತ್ಯ ಕಾಮಗಾರಿಗಳನ್ನು ಅಧಿಕಾರಿಗಳು ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.