ಮಡಿಕೇರಿ, ಆ.2: ಕೊಡಗು ಜಿಲ್ಲೆಯ ಎಲ್ಲೆಡೆಯೂ ಈ ಸಂಜೆಯಿಂದ ಮಳೆ ಚುರುಕುಗೊಂಡಿರುವದು ಕಂಡುಬಂದಿದೆ. ಕೊಡಗಿನ ಪುಷ್ಪಗಿರಿ ತಪ್ಪಲು ಸೇರಿದಂತೆ ತಲಕಾವೇರಿ ಹಾಗೂ ಭಾಗಮಂಡಲ, ನಾಪೆÇೀಕ್ಲು, ದಕ್ಷಿಣ ಕೊಡಗು, ಶಾಂತಳ್ಳಿ, ಕೂಡಿಗೆ ಮುಂತಾದ ಪ್ರದೇಶಗಳಲ್ಲಿ ಮಳೆ ಅಧಿಕ ಪ್ರಮಾಣದಲ್ಲಿ ಬೀಳತೊಡಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ಇತರೆಡೆಗಳಲ್ಲಿ ಕೂಡ ಮಳೆಯಾಗುತ್ತಿದೆ. ಆರಂಭಿಕ ದಿನಗಳಲ್ಲಿ ದೂರವಾಗಿದ್ದ ಪುಷ್ಯಮಳೆ ಕೊನೆಯ ಹಂತದಲ್ಲಿ ಚುರುಕುಗೊಂಡ ಬೆನ್ನಲ್ಲೆ ಚಳಿಯ ವಾತಾವರಣ ಉಂಟಾಗಿದೆ.
ಜಿಲ್ಲಾಡಳಿತ ಪ್ರಕಟಣೆ
ಜಿಲ್ಲೆಯಲ್ಲಿ ತಾ. 3ರ ಬೆಳಿಗ್ಗೆಯಿಂದ ತಾ. 4 ರ ಬೆಳಿಗ್ಗೆನವರೆಗೆ ಎಲ್ಲೊ ಅಲರ್ಟ್ (2 ಇಂಚಿನಿಂದ 4 ಇಂಚು ಮಳೆ ಬೀಳುವ ಸಾಧ್ಯತೆ) ತಾ. 4ರ ಬೆಳಿಗ್ಗೆಯಿಂದ ತಾ. 7ರ ಬೆಳಿಗ್ಗಿನವರೆಗೆ ಆರೆಂಜ್ ಅಲರ್ಟ್ (4 ಇಂಚಿನಿಂದ 8 ಇಂಚುವರೆಗೆ ಮಳೆ ಬೀಳುವ ಸಾಧ್ಯತೆ)ನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಮನವಿ ಮಾಡಿದೆ.
ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ 24ಘಿ7 ಕಂಟ್ರೋಲ್ ರೂ. 08272- 221077, Whಚಿಣsಚಿಠಿಠಿ ಓo:8550001077 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.