ಮಡಿಕೇರಿ, ಆ. 2: ಬಲ್ಯಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲ್ಯಮುಂಡೂರು ಗ್ರಾಮದ ಕೊಟ್ಟಂಗಡ ಅಯ್ಯಪ್ಪ ಅವರ ಮನೆ ಮುಂದೆ ನಿನ್ನೆ ರಾತ್ರಿ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಭಯವನ್ನುಂಟು ಮಾಡಿದೆ. ಆದ್ದರಿಂದ ಸುತ್ತ ಮುತ್ತಲಿನ ಗ್ರಾಮದವರು ತಮ್ಮ ದನಕರುಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ವೀರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೊರ್ಚಾದ ಸದಸ್ಯರೂ ಆದ ಅಯ್ಯಪ್ಪ ಮನವಿ ಮಾಡಿದ್ದಾರೆ.