ಪೆÇನ್ನಂಪೇಟೆ, ಆ.2: ಕೊಡಗಿನ ಇಸ್ಲಾಂ ಸಾಂಸ್ಕøತಿಕ ಸಂಘಟನೆಯಾದ ಕೊಡಗು ದಫ್ ಸಮಿತಿಯ (ಕೆ.ಡಿ.ಎಸ್.) ನೂತನ ಅಧ್ಯಕ್ಷರಾಗಿ ಪೆÇನ್ನಂಪೇಟೆಯ ಆಲೀರ ಎಂ. ರಶೀದ್ ಅವರು ಆಯ್ಕೆಯಾಗಿದ್ದಾರೆ.

ವೀರಾಜಪೇಟೆಯ ಡಿ.ಎಚ್.ಎಸ್. ಎನ್ಕ್ಲೇವ್‍ನಲ್ಲಿರುವ ಎನ್.ಸಿ.ಟಿ. ಎಂಟರ್‍ಪ್ರೈಸಸ್ ಸಭಾಂಗಣದಲ್ಲಿ ಸಮಿತಿಯ ಗೌರವಾಧ್ಯಕ್ಷ ಅಕ್ಕಳತಂಡ ಎಸ್. ಮೊಯಿದು ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಮಿತಿಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಳಿಸಲಾಯಿತು.

ಅದರಂತೆ ಉಪಾಧ್ಯಕ್ಷರಾಗಿ ಪೈಝಿ ಚಿಟ್ಟಡೆ ಹಾಗು ಝುಬೈರ್ ಕಡಂಗ, ಪ್ರಧಾನ ಕಾರ್ಯದರ್ಶಿಯಾಗಿ ಶಫೀಕ್ ಗುಂಡಿಕೆರೆ, ಸಹ ಕಾರ್ಯದರ್ಶಿಯಾಗಿ ತೌಸಿಫ್ ಅಮ್ಮತಿ, ಕೋಶಾಧಿಕಾರಿಯಾಗಿ ಬಶೀರ್ ಗುಂಡಿಕೆರೆ, ನಿರ್ದೇಶಕರುಗಳಾಗಿ ಝುಬೈರ್ ಬೆಂಗಳೂರು, ಅಬ್ಬಾಸ್ ಝೈನಿ ದೇವಣಗೇರಿ, ಅಶ್ರಫ್ ಎಮ್ಮೆಮಾಡು ಮತ್ತು ಅಶ್ರಫ್ ವಯಕೋಲ್ ಅವರು ಆಯ್ಕೆಗೊಂಡರು.

ನೂತನ ಅಧ್ಯಕ್ಷ ಆಲೀರ ಎಂ. ರಶೀದ್ ಅವರು, ಪೆÇನ್ನಂಪೇಟೆ ಗ್ರಾಮ ಪಂಚಾಯಿತಿಯ ಸದಸ್ಯರಾಗಿ, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಡವ ಮುಸ್ಲಿಂ ಅಸೋಸಿಯೇಷನ್ ನ (ಕೆ.ಎಂ.ಎ.) ಸದಸ್ಯರಾಗಿರುವ ಇವರು, ಕಾಟ್ರಕೊಲ್ಲಿಯ ಮೊಹಿದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಸಮಿತಿಯ ಸ್ಥಾಪಕ ಅಧ್ಯಕ್ಷÀ ಮಜೀದ್ ಅವರು ಉಪಸ್ಥಿತರಿದ್ದರು. ಆರಂಭದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ಗುಂಡಿಕೆರೆಯ ಆಲಿ ಮುಸ್ಲಿಯಾರ್ ನೇತೃತ್ವ ನೀಡಿದರು. ಸಮಿತಿ ಪದಾಧಿಕಾರಿ ಶಫೀಕ್ ಗುಂಡಿಕೆರೆ ಸ್ವಾಗತಿಸಿದರು. ತೌಸಿಫ್ ಅಮ್ಮತ್ತಿ ವಂದಿಸಿದರು.