ಕೂಡಿಗೆ, ಆ. 2 : ಕೂಡು ಮಂಗಳೂರು ಬಿ.ಜೆ.ಪಿ ಮಹಿಳಾ ಮೋರ್ಚಾ ಶಕ್ತಿ ಕೇಂದ್ರದ ವತಿಯಿಂದ ಕೂಡಿಗೆ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ಸಂರಕ್ಷಣೆ ದಿನದ ಅಂಗವಾಗಿ ವಿವಿಧ ಬಗೆಯ ಹಣ್ಣಿನ ಮತ್ತು ಇತರ ಗಿಡಗಳನ್ನು ನೆಡಲಾಯಿತು..

ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆ ಕರ ಪತ್ರಗಳನ್ನು ವಿತರಣೆ ಮಾಡಿ ಸಾಧನೆಯ ಮಾಹಿತಿಗಳನ್ನು ಗ್ರಾಮಸ್ಥರಿಗೆ ತಿಳಿಸಿದರು.

ಶಕ್ತಿ ಕೇಂದ್ರದ ಅಧ್ಯಕ್ಷೆ ಸಾವಿತ್ರಿರಾಜು, ಪ್ರಧಾನ ಕಾರ್ಯದರ್ಶಿ ಕನಕ, ಸದಸ್ಯರಾದ ಗೌರಮ್ಮ, ಸುಶೀಲ, ವಾಣಿ, ಪವಿತ್ರ, ಪಾರ್ವತಿ, ನಿರ್ಮಲ ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಕೂಡುಮಂಗಳೂರು ಬೂತ್ ಸಮಿತಿಯ ಅಧ್ಯಕ್ಷ್ಷ ಅರ್. ಕೃಷ್ಣ, ಕಾರ್ಯದರ್ಶಿ ಪ್ರವೀಣ್, ಸಹಕಾರ ಸಂಘದ ನಿರ್ದೇಶಕ ಕೆ.ಕೆ. ಭೋಗಪ್ಪ, ಮಾಜಿ ಅಧ್ಯಕ್ಷ ಎಂ. ಬಿ. ಜಯಂತ್, ಕುಮಾರ ಸ್ವಾಮಿ, ಕಿರಣ್, ರಾಜಣ್ಣ, ಸುಮಂತ್, ಸತೀಶ್, ದರ್ಶನ, ನಿಂಗರಾಜ ಕಾರ್ಯಕರ್ತರು ಹಾಜರಿದ್ದರು.