*ಕಡಂಗ, ಆ. 2: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ ಎಮ್ಮೆಮಾಡು ಶಾಖೆ ಹೆಲ್ಪ್ ಡೆಸ್ಕ್ ವತಿಯಿಂದ ಎಮ್ಮೆಮಾಡು ವ್ಯಾಪ್ತಿಯ ಉಸ್ತಾದರಿಗೆ ಕಿಟ್ ವಿತರಣೆ ನಡೆಯಿತು.

ಕೊರೊನಾ ಸೋಂಕು ಹರಡುವಿಕೆಯ ಭೀತಿಯಿಂದ ಸರ್ಕಾರ ಶಾಲಾ-ಕಾಲೇಜುಗಳು ಸೇರಿದಂತೆ ವಿದ್ಯಾ ಸಂಸ್ಥೆಗಳನ್ನು ಮುಚ್ಚಿರುವುದರಿಂದ ಧಾರ್ಮಿಕ ವಿದ್ಯಾ ಸಂಸ್ಥೆಗಳ ಉಸ್ತಾದರುಗಳು ಕೆಲಸವಿಲ್ಲದೆ ಸಂಕಷ್ಟದಲ್ಲಿರುವುದನ್ನು ಗಮನಿಸಿ ಎಸ್ಸೆಸ್ಸೆಫ್ ಎಮ್ಮೆಮಾಡು ಶಾಖೆ ಹೆಲ್ಪ್ ಡೆಸ್ಕ್ ವತಿಯಿಂದ ಅಗತ್ಯ ವಸ್ತುಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು.

ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷ ಸಯ್ಯಿದ್ ಕಿಲ್ಲೂಲ್ ತಂಙಳ್ ಪ್ರಾರ್ಥಿಸಿದರು. ಎಸ್‍ವೈಎಸ್ ಕೊಡಗು ಜಿಲ್ಲಾ ಉಪಾಧ್ಯಕ್ಷ ಸಯ್ಯಿದ್ ಇಲ್ಯಾಸ್ ತಂಙಳ್ ಉದ್ಘಾಟಿಸಿದರು. ಎಸ್‍ಎಸ್‍ಎಫ್ ಕೊಡಗು ಜಿಲ್ಲೆ ಸಮಿತಿ ಸದಸ್ಯರಾದ ಶೌಕತ್, ಎಮ್ಮೆಮಾಡು ಶಾಖೆ ಅಧ್ಯಕ್ಷ ನಝೀರ್ ಬಾಖವಿ, ಕಾರ್ಯದರ್ಶಿ ನವ್ವಾರ್, ಕೋಶಾಧಿಕಾರಿ ಹಾರಿಸ್ ಮುಸ್ಲಿಯಾರ್, ಸಮಿತಿ ಸದಸ್ಯರುಗಳು ಇದ್ದರು.