ವೀರಾಜಪೇಟೆ, ಜು. 31 : ವೀರಾಜಪೇಟೆ ಪಟ್ಟಣದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಘಟಕವನ್ನು ನಿರ್ಮಿಸುವ ಬಗ್ಗೆ ಶಾಸಕ ಕೆ.ಜಿ. ಬೋಪಯ್ಯ ಅವರ ಮನವಿಯ ಮೇರೆ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಸಂಸ್ಥೆಯ ಮುಖ್ಯ ಕಾಮಗಾರಿ ಅಭಿಯಂತರರು ಬೆಂಗಳೂರು ಇವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಅತೀ ಶೀಘ್ರದಲ್ಲಿಯೆ ಪಟ್ಟಣದಲ್ಲಿ ಬಸ್ ಘಟಕ ಸ್ಥಾಪನೆಗೊಳ್ಳಲಿದೆ.

ವೀರಾಜಪೇಟೆಯಲ್ಲಿ ಬಸು ಘಟಕ ನಿರ್ಮಾಣ ಮಾಡುವ ಬಗ್ಗೆ 24.02.10 ಹಾಗೂ 24.02.20 ರಂದು 2 ಪತ್ರಗಳನ್ನು ಬರೆಯಲಾಗಿದ್ದು 05.03.20ರಂದು ಮುಖ್ಯ ಸಂಚಾರಿ ವ್ಯವಸ್ಥಾಪರು ಸ್ಥಳ ಪರೀಶೀಲನೆ ನಡೆಸಿ ಘಟಕ ಪ್ರಾರಂಭಿಸಿದರೆ ಸುತ್ತಮುತ್ತಲಿನ ಪ್ರದೇಶಗಳಾದ ನಾಪೋಕ್ಲು, ಪಾಲಿಬೆಟ್ಟ, ಮಡಿಕೇರಿ ಇತ್ಯಾದಿ ಜಾಗಗದಲ್ಲಿ ನಿಲುಗಡೆ ಆಗುತ್ತಿರುವ ಸುಮಾರು 75 ಬಸ್ಸುಗಳಿಗೆ ಅನುಕೂಲವಾಗಲಿದೆ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

1968ರಲ್ಲಿ ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಡಿಪೋ ಸ್ಥಾಪನೆ ಗೊಂಡಿದೆ. ಅಲಿಂದ ಇಲ್ಲಿಯªರೆಗೂ ಎಲ್ಲಾ ಕಾರ್ಯಚಟುವಟಿಕೆಗಳು ಮಡಿಕೇರಿಯಿಂದಲೇ ನಡೆಯುತ್ತದೆ. ಪ್ರತಿನಿತ್ಯ 301 ಬಸುಗಳು ಜಿಲ್ಲೆಯಿಂದ ಕಾಂiÀರ್i ನಿರ್ವಹಿಸುತ್ತಿದ್ದು 41659 ಸಾವಿರ ಕಿ.ಮೀ.ನಷ್ಟು ಸೌಲಭ್ಯ ಒದಗಿಸಲಾಗಿದೆ. ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ, ವೀರಾಜಪೇಟೆ, ಪೊನ್ನಂಪೇಟೆ ಸೇರಿದಂತೆ ತಾಲೂಕುಗಳಿಂದ ಮತ್ತು 16 ಹೋಬಳಿಗಳಿಂದ ಕೂಡಿದೆ. ಜಿಲ್ಲೆಯಲ್ಲಿ ಸಾರಿಗೆ ಸೇವೆಯನ್ನು ವಿಸ್ತರಿಸಲು ಹೆಚ್ಚಿನ ಅವಕಾಶ ಇದ್ದು ಮೂಲಭೂತ ಸೌಕರ್ಯ ಒದಗಿಸಲು ಘಟಕ ಕೊರತೆಯಿಂದ ಹಾಗೂ ಮಡಿಕೇರಿ ಘಟಕದ ಮೇಲಿನ ಕಾರ್ಯಾಚರಣೆ ಒತ್ತಡದಿಂದ ವಿಸ್ತರಣೆ ಸಾಧ್ಯವಾಗಿಲ್ಲ. ಪ್ರತಿನಿತ್ಯ ಜಿಲ್ಲೆಯ ಬಹುತೇಕ ಗ್ರಾಮಾಂತರ ಪ್ರದೇಶಗಳಿಂದ ಬಸ್ ಸೌಕರ್ಯ ಒದಗಿಸಲು ಸಾರ್ವಜನಿಕರು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳಿಂದ ಬೇಡಿಕೆ ಬರುತ್ತಿದ್ದು ಘಟಕ ಸ್ಥಾಪನೆ ಬಹುಕಾಲದ ಬೇಡಿಕೆಯಾಗಿದೆ.

ತಾಲೂಕಿನಲ್ಲಿ ಜನದಟ್ಟಣೆ ಅಧಿಕವಾಗಿದ್ದು ಗ್ರಾಮೀಣ ಭಾಗದ ಪ್ರಯಾಣಿಕರು ಬಸ್ಸಿಲ್ಲದೆ ಪರದಾಡುತ್ತಿದ್ದಾರೆ. ಪ್ರಸ್ತುತ ವೀರಾಜಪೇಟೆ ಬಸ್ ನಿಲ್ದಾಣದಿಂದ 146 ಬಸುಗಳು ಕಾರ್ಯ ನಿರ್ವಹಿಸುತ್ತಿದೆ. ರಾಜಹಂಸ, ವೋಲ್ವೊ, ವೇಗದೂತ, ಸಾಮಾನ್ಯ ಮಾದರಿಯ ಬಸುಗಳಾಗಿದೆ. ಅದರಲ್ಲಿ 18 ಅಂತರಾಜ್ಯ ಸಾರಿಗೆಗಳಾಗಿದೆ.

ಪ್ರಸ್ತುತ ವೀರಾಜಪೇಟೆ ಬಸ್ ನಿಲ್ದಾಣವು ಸರ್ವೆ ಸಂಖ್ಯೆ 15/2, 17/2 ಮತ್ತು ಇತರೆ ಸಂಖ್ಯೆಯಲ್ಲಿ ಒಟ್ಟು 3.89 ಎಕರೆ ನಿವೇಶನವನ್ನು ಹೊಂದಿದೆ. ಈ ನಿವೇಶನದಲ್ಲಿ ಬಸ್ ನಿಲ್ದಾಣ, ಶೌಚಗೃಹ, ಕಟ್ಟಡ ಹಾಗೂ ಆವರಣ ಕಾಂಕ್ರೀಟ್ ಸೇರಿದಂತೆ ಸುಮಾರು 2 ಎಕರೆ ಜಾಗವು ಬಸ್ ನಿಲ್ದಾಣಕ್ಕಾಗಿ ಅಭಿವೃದ್ಧಿ ಪಡಿಸಲಾಗಿದೆ. ಉಳಿಕೆ 1.89 ಎಕರೆ ಖಾಲಿ ಜಾಗವಿದೆ ಎಂದು ನಕ್ಷೆಯಲ್ಲಿ ಗುರುತಿಸಲಾಗಿದೆ. ಬಸ್ ನಿಲ್ದಾಣದಲ್ಲಿ ಖಾಲಿ ಇರುವ ಜಾಗವನ್ನು ಬಳಸಿಕೊಂಡು ಘಟಕ ನಿರ್ಮಿಸಿದ್ದಲ್ಲಿ ಬಸ್ ನಿಲ್ದಾಣ ಹಾಗೂ ಘಟಕದ ನಡುವಿನ ಅಂತರ ಕಡಿಮೆಯಾಗುವುದರೊಂದಿಗೆ ಸಂಸ್ಥೆಗೆ ಅನುಪಯುಕ್ತ ಕಿ.ಮೀ.ನಿಂದ ಉಳಿತಾಯವಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಘಟಕ ನಿರ್ಮಾಣ ವಿಳಂಬವಾಗುತ್ತಿರುವುದರಿಂದ ಪ್ರಯಾಣಿಕರ ಹಾಗೂ ಶಾಲಾ ವಿದ್ಯಾರ್ಥಿಗಳ ಬೇಡಿಕೆಗೆ ಅನುಸಾರವಾಗಿ ಸಮರ್ಪಕ ಸಾರಿಗೆ ಸೌಲಭ್ಯ ವಿಸ್ತರಿಸಲು ಕಷ್ಟಸಾಧ್ಯವಾಗಿರುತ್ತದೆ. ಅದ್ದರಿಂದ ಬಸ್ ನಿಲ್ದಾಣದ ಪೂರ್ಣ ನಿವೇಶನವನ್ನು ಬಳಸಿಕೊಂಡು ಮುಂಭಾಗದ ಜಾಗವನ್ನು ಬಸ್ ನಿಲ್ದಾಣವಾಗಿ ಪರಿವರ್ತಿಸಿ ಘಟಕ ಹಾಗೂ ನಿಲ್ದಾಣಗಳೆರಡು ಸರಿಹೊಂದುವಂತೆ ಯೋಜನೆಯನ್ನು ತಯಾರಿಸಿ ಸ್ಥಾಪಿಸುವುದು. ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಘಟಕ ಸ್ಥಾಪಿಸುವ ವಿಚಾರವಾಗಿ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ 22.07.20ರಂದು ಪತ್ರ ಬರೆದು ತಾಲೂಕಿನಲ್ಲಿ ಬಸ್ ಡಿಪೋ ಸ್ಥಾಪನೆ ಮಾಡಲು 2011-12ನೇ ಸಾಲಿನಲ್ಲಿ ಹಣ ಬಿಡುಗಡೆ ಆಗಿತ್ತು. ಸೂಕ್ತ ಸ್ಥಳ ದೊರೆಯದ ಕಾರಣ ಘಟಕ ಸ್ಥಾಪಿಸಲು ಸಾಧ್ಯವಾಗಿಲ್ಲ. ಈಗಾಗಲೇ ಪುತ್ತೂರು ವಿಭಾಗದ ಅಧಿಕಾರಿಗಳು ಪ್ರಸ್ತುತ ಇರುವ ನಿಲ್ದಾಣದಲಿ ಖಾಲಿ ಇರುವ ಜಾಗವನ್ನು ಗುರುತಿಸಿ ಘಟಕ ನಿರ್ಮಿಸಲು ಸೂಕ್ತ ಸ್ಥಳವೆಂದು ಸಂಸ್ಥೆಗೆ ವರದಿ ನೀಡಿದ್ದಾರೆ. ಈ ವರದಿ ಮತ್ತು ತಾಂತ್ರಿಕ ಸಲಹೆಗಳನ್ನು ಪರಿಗಣಿಸಿ ಸೂಕ್ತ ಅನುದಾನ ಬಿಡುಗಡೆ ಮಾಡಿ ಘಟಕ ನಿರ್ಮಿಸಲು ಸೂಕ್ತ ನಿರ್ದೇಶನ ನೀಡುವಂತೆ ಕೋರಿದ್ದರು.