1935ರಂದು ಆಗಸ್ಟ್ ಮೊದಲ ಭಾನುವಾರವನ್ನು ಫ್ರೆಂಡ್‍ಶಿಪ್ ಡೇ ಎಂದು ಅಮೇರಿಕಾ ಸಂಸತ್ ಘೋಷಿಸಿತು. ಸ್ನೇಹಿತರ ದಿನವನ್ನು ಮೊದಲು ಆರಂಭಿಸಿದವರು ಜಾಯ್ಸ್ ಹಾಲ್. 1919ರಲ್ಲಿ ಹಾಲ್ ಮಾರ್ಕ್ ಕಾರ್ಡ್‍ಗಳನ್ನು ಸ್ಥಾಪಿಸಿದ ಈತ ಆಗಸ್ಟ್ ಮೊದಲ ಭಾನುವಾರವನ್ನು ಜನರು ಸ್ನೇಹಿತರ ದಿನವನ್ನು ಆಚರಿಸಬೇಕೆಂದು ಬಯಸಿ ಇದನ್ನು ಆರಂಭಿಸಿದ.

1958 ಜುಲೈ 20ರಂದು ಡಾ ಅರ್ಟೆಮಿಯೊ ಬ್ರಾಚೊ ಎಂಬವರು ವಿಶ್ವ ಮಟ್ಟದಲ್ಲಿ ಸ್ನೇಹಿತರ ದಿನವನ್ನು ಆಚರಿಸಬೇಕೆಂದು ಪ್ರಸ್ತಾಪವನ್ನಿಟ್ಟರು.

2011ರ ಏಪ್ರಿಲ್ 27 ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸ್ನೇಹಿತರ ದಿನವನ್ನು ಜುಲೈ 30 ರಂದು ಆಚರಿಸಬೇಕೆಂದು ನಿರ್ಣಯ ಕೈಗೊಳ್ಳಲಾಗಿತ್ತು.

ಸಾಂಪ್ರದಾಯಿಕವಾಗಿ ಆಗಸ್ಟ್ ಮೊದಲ ಭಾನುವಾರವನ್ನು ಎಲ್ಲೆಡೆ ವಿಶ್ವ ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತಿದೆ.

ಆದರೆ ಕೆಲವೊಂದು ರಾಷ್ಟ್ರಗಳಲ್ಲಿ ಸ್ನೇಹಿತರ ದಿನಕ್ಕೆ ನಿಗದಿತ ದಿನವಿಲ್ಲ.

ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಅಪರಿತರಾಗಿದ್ದವರು, ಪರಿಚಿತರಾಗಿ,

ತಮ್ಮ ಸುಂದರ ಭಾವನೆಗಳನ್ನು ಹಂಚಿಕೊಳ್ಳುವ ಒಂದು ಸುಂದರ ಬಂಧವೇ ಸ್ನೇಹ ಎನ್ನಬಹುದು.

ಸ್ನೇಹಕ್ಕೆ ಇಂತಿಷ್ಟು ವಯೋಮಿತಿ, ಜಾತಿ, ಧರ್ಮ, ಬಣ್ಣ,ಲಿಂಗಗಳ ಮಿತಿಯಿಲ್ಲ.

ರಕ್ತ ಸಂಬಂಧವಿಲ್ಲದಿದ್ದರೂ, ರಕ್ತ ಸಂಬಂಧಕ್ಕೂ ಮಿಗಿಲಾದ ಸ್ನೇಹವಾಗಿದೆ ಗೆಳೆತನ.

ಜಗತ್ತು ಆಧುನಿಕ ಯುಗದತ್ತ ಮರಳುತ್ತಿದೆ.

ಕಂಪ್ಯೂಟರ್ ಯುಗದಲ್ಲಿ ಎಲ್ಲವೂ ಮೋಡರ್ನ್ ಆಗಿಬಿಟ್ಟಿದೆ.

ಅದೇ ರೀತಿಯಲ್ಲಿ ಗೆಳತನಕ್ಕೆ ಹಿಂದಿನ ಕಾಲದಲ್ಲಿ ಇದ್ದ ಮಹತ್ವ ಈಗಿಲ್ಲ.

ಹಿರಿಯರು ಹೇಳುವ ಮಾತಿದು” ಒಬ್ಬ ವ್ಯಕ್ತಿಯ, ವ್ಯಕ್ತಿ ಗುಣ ನಡತೆಯ ಬಗ್ಗೆ ತಿಳಿಯಲು ಆತನನ್ನು ನೋಡಬೇಕೆಂದಿಲ್ಲ.

ಆತನ ಸ್ನೇಹಿತರನ್ನು ನೋಡಿದರೆ ಸಾಕು ಎಂದು

ಆದರೆ ಈಗ ಕಾಲಘಟ್ಟದಲ್ಲಿನ ಗೆಳೆತನ ಹಣಕ್ಕಾಗಿ ಮಾತ್ರವಾಗಿದೆ ಎನ್ನುವಂತಾಗಿದೆ.

ನಾವೆಲ್ಲರೂ ದಿನನಿತ್ಯ ಮಾಧ್ಯಮಗಳಲ್ಲಿ ನೋಡುವ ಸುದ್ದಿಗಳಲ್ಲಿ ಕೆಲವೊಂದು ಈಗಿರುತ್ತೆ”....

“ಹಣಕ್ಕಾಗಿ ಚೈಲ್ಡ್ ವುಡ್ ಗೆಳಯನನ್ನು ಕೊಂದ ಸ್ನೇಹಿತ”

“ಗೆಳಯನಿಗೆ ಮೋಸ ಮಾಡಿ, ಹಣದೊಂದಿಗೆ ಪರಾರಿಯಾದ ಗೆಳೆಯ”

ಎಲ್ಲಾ ಸ್ನೇಹಿತರು ಈ ರೀತಿಯಲ್ಲಿ ಎಂದಲ್ಲ. ಪ್ರಸ್ತುತ ಇಂತಹ ಘಟನೆಗಳು ಗೆಳತನದಲ್ಲಿ ನಡೆಯುತ್ತಿದೆ.

ಮದುವೆ ರೀತಿಯಲ್ಲಿ ಗೆಳತನವನ್ನು ಅಳೆದು ತೂಗಿ ಮಾಡಿಕೊಳ್ಳುವ ಸಂಬಂಧವೇ?... ಖಂಡಿತ ಅಲ್ಲ.

ಮಲಯಾಳಂ ಪ್ರಸಿದ್ಧ ಕವಿ ಒಬ್ಬರ ಮಾತಿದೆ, ಗೆಳತನಕ್ಕೆ ಕಣ್ಣುಗಳಿಲ್ಲ, ಸೌಂದರ್ಯ,

ಏನೂ ಇಲ್ಲ... ಯಾರಿಂದಲೂ ಕಿತ್ತು ಕೊಳ್ಳುವ ಆಸ್ತಿಯೂ ಅಲ್ಲ.

ಗೆಳತನವೆಂಬುದು ಒಂದು ವಿಶಾಲವಾದ ಸಾಗರವಾಗಿದೆ.

ಈ ಸಾಗರದಲ್ಲಿ ಹಲವಾರು ಗೆಳೆಯರು ಗೆದ್ದು ದಡ ಸೇರಿದ್ದಾರೆ, ಇನ್ನೂ ಕೆಲವರು ದಡ ಸೇರಲು ಪರಿತಪಿಸುತ್ತಿದ್ದಾರೆ.

ಇಂದಿನ ಕಾಲಘಟ್ಟದ ಯುವಕರಿಗೆ ಸ್ನೇಹ,ಸಂಬಂಧಗಳ ಬೆಲೆ ಏನೆಂಬುದೇ ಗೊತ್ತಿಲ್ಲ.

ಗೆಳತನವೆಂದರೆ ಹಣವಲ್ಲ, ಗೆಳತನವೆಂದರೆ ಸಂಪತ್ತಲ್ಲ, ಗೆಳತನವೆಂದರೆ ನಮ್ಮ ಜೀವನದಲ್ಲಿ ಅಮೂಲ್ಯವಾದ ಪಾತ್ರವನ್ನು ನಿರ್ವಹಿಸಿದ ಒಬ್ಬ ವ್ಯಕ್ತಿ, ನನ್ನ ಜೀವನಕ್ಕೆ ಮಾರ್ಗದರ್ಶಕನಾದವ ನನ್ನ ಸ್ನೇಹಿತ ಎಂದು ಹೇಳುವ ಸ್ನೇಹಿತರು ಎಷ್ಟು ಮಂದಿ ಇದ್ದಾರೆ ಎಂದು ನೋಡಿದರೆ, ಪ್ರಸ್ತುತ ದಿನಗಳಲ್ಲಿ ಈ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.

“ಒಳ್ಳೆಯ ಸ್ನೇಹಿತನೊಬ್ಬ ಜತೆಯಲ್ಲಿದ್ದರೆ ಏಳು ಬೆಟ್ಟಗಳು ಹತ್ತಿಳಿಯುವುದು, ಈಜುವುದು ಕಷ್ಟವಾಗಲಾರದೂ” ಎಂಬ ಮಾತಿದೆ

“ಗೆಳತನಕ್ಕೆ ಸಂಪತ್ತಿನ ಬೆಲೆ ಕಟ್ಟಬೇಡಿ”

‘ಎಲ್ಲರಿಗೂ ಹ್ಯಾಪಿ ಫ್ರೆಂಡ್ಸ್‍ಶಿಪ್ ಡೇ’

-ಕೆ.ಎಂ. ಇಸ್ಮಾಯಿಲ್