ಸಿದ್ದಾಪುರ: ಕೊರೊನಾ ಸೋಂಕಿನಿಂದಾಗಿ ಸೀಲ್‍ಡೌನ್ ಆದ ಸಿದ್ದಾಪುರದ ಕರಡಿಗೋಡು ರಸ್ತೆಯ 33 ಮತ್ತು ಹಳೇ ಸಿದ್ದಾಪುರದ 18 ಮನೆಗಳ ನಿವಾಸಿಗಳಿಗೆ ಸಿದ್ದಾಪುರದ ಯುವಶಕ್ತಿ ಯೂತ್ ಮೂವ್‍ಮೆಂಟ್ ವತಿಯಿಂದ ದಿನಸಿ ಮತ್ತು ತರಕಾರಿ ಸಾಮಗ್ರಿಗಳನ್ನು ಒಳಗೊಂಡ ಕಿಟ್‍ಗಳನ್ನು ವಿತರಿಸಲಾಯಿತು.

ಈ ಸಂದರ್ಭ ಸಂಘದ ಸದಸ್ಯರಾದ ದಿನೇಶ್, ಕಿಶೋರ್, ರೋಹಿತ್, ವಿಕ್ರಾಂತ್, ನಿತೀಶ್, ಶ್ರೀಲೇಶ್, ಪ್ರವೀಣ್ ಮೊದಲಾದವರು ಹಾಜರಿದ್ದರು.ನಲ್ಲೂರು: ಲಕ್ಕುಂದ ಕಾಲೋನಿಯಲ್ಲಿ ಸೀಲ್‍ಡೌನ್ ಪ್ರದೇಶದ ನಿವಾಸಿಗಳಿಗೆ ವೀರಾಜಪೇಟೆ ತಾಲೂಕು ಬಿಜೆಪಿ ವತಿಯಿಂದ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಈ ಸಂದರ್ಭ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಭೀಮಯ್ಯ, ತಾಲೂಕು ಅಧ್ಯಕ್ಷ ನೆಲ್ಲೀರ ಚಲನ್‍ಕುಮಾರ್, ಪ್ರಮುಖರಾದ ಚೆಪ್ಪುಡೀರ ಮಾಚಯ್ಯ, ಸಾಮಾಜಿಕ ಜಾಲತಾಣ ಸಂಚಾಲಕ ಚಿರಿಯಪಂಡ ಸಚಿನ್ ಪೆಮ್ಮಯ್ಯ, ಅಣ್ಣಳಮಾಡ ನವೀನ್ ಇದ್ದರು.ವೀರಾಜಪೇಟೆ: ಕೊರೊನಾ ಸೋಂಕಿತ ವ್ಯಕ್ತಿಗಳ ನಿವಾಸ ಸೇರಿದಂತೆ ಸುತ್ತಲಿನ ಸೀಲ್‍ಡೌನ್ ಮಾಡಲಾಗಿದ್ದ ನಿವಾಸಿಗಳಿಗೆ ದಿನಬಳಕೆಯ ವಸ್ತುಗಳು ಮತ್ತು ತರಕಾರಿಗಳನ್ನು ಜೆ.ಡಿ.ಎಸ್. ಪ್ರಮುಖರು ನೀಡಿದರು.

ವೀರಾಜಪೇಟೆ ಗಾಂಧಿನಗರದ ವ್ಯಕ್ತಿಗೆ ಕೊರೊನಾ ಸೊಂಕು ಧೃಡಪಟ್ಟ ಹಿನ್ನೆಲೆ ನಿರ್ಬಂಧ ಪ್ರದೇಶವೆಂದು ಪರಿಗಣಿಸಿರುವ 12 ಕುಟುಂಬಗಳಿಗೆ ನಗರ ಜೆ.ಡಿ.ಎಸ್. ಘಟಕವು ದಿನಬಳಕೆಯ ವಸ್ತುಗಳು ಮತ್ತು ತರಕಾರಿ ನೀಡಿತು.

ಈ ಸಂದರ್ಭ ನಗರ ಅಧ್ಯಕ್ಷ ಪಿ.ಎ. ಮಂಜುನಾಥ್, ಸಾಮಾಜಿಕ ಜಾಲತಾಣದ ತಾಲೂಕು ಅಧ್ಯಕ್ಷ ಕುಯಿಮಂಡ ರಾಕೇಶ್ ಬಿದ್ದಪ್ಪ, ಪಂದಿಯಂಡ ರವಿ ಚಂಗಪ್ಪ, ಅಪ್ಪಂಡೇರಂಡ ಪಿ. ಕುಶಾಲಪ್ಪ ಮತ್ತು ದುಶ್ಯಂತ್ ರೈ ಹಾಜರಿದ್ದರು.

ನಗರದ ಅಪ್ಪಯ್ಯ ಸ್ವಾಮಿ ರಸ್ತೆಯ 8 ಕುಟುಂಬಗಳಿಗೆ ಚುನಾಯಿತ ಸದಸ್ಯೆ ಟಿ.ಕೆ. ಯಶೋಧ ಮಂದಣ್ಣ ಮತ್ತು ಪತಿ ಅನಿಲ್ ಮಂದಣ್ಣ ಅವರು ದಿನಬಳಕೆ ಮತ್ತು ತರಕಾರಿ ಕಿಟ್‍ಗಳನ್ನು ನೀಡಿದರು. ಕಿಟ್ ವಿತರಣೆ ಸಂದರ್ಭ ಸ್ಥಳೀಯರಾದ ಜಾನ್‍ಸನ್ ಮತ್ತು ನಿಕ್ಸ್‍ನ್ ಹಾಜರಿದ್ದರು.