ನಾಪೋಕ್ಲು: ವಿಶ್ವ ಪರಿಸರ ಸಂರಕ್ಷಣಾ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ದೊಡ್ಡಪುಲಿಕೋಟು ಗ್ರಾಮದ ಮಾರುತಿ ಯುವಕ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು. ಬಿಜೆಪಿಯ ಜಿಲ್ಲಾ ಸಮಿತಿ ಸದಸ್ಯರಾದ ಕರವಂಡ ಲವ ನಾಣಯ್ಯ, ಬಲ್ಲಮಾವಟಿ-ದೊಡ್ಡಪುಲಿಕೋಟು ಬಿಜೆಪಿ ಬೂತ್ ಸಮಿತಿಯ ಕಾರ್ಯದರ್ಶಿ ಕರವಂಡ ಅಪ್ಪಣ್ಣ, ಸಮಿತಿ ಸದಸ್ಯರಾದ ಮುಕ್ಕಾಟಿರ ಸುತನ್, ಬಿನ್ನು, ಸುಮನ್, ಯತೀಶ್, ಲವ, ಬೆಳ್ಳಿಯಪ್ಪ, ಚೋಕಿರ ಬಾಬಿ ಭೀಮಯ್ಯ, ಮಾರುತಿ ಯುವಕ ಸಂಘದ ಅಧ್ಯಕ್ಷ ಮುಕ್ಕಾಟಿರ ಜಾಲಿ ಚಿಂಗಪ್ಪ ಹಾಜರಿದ್ದರು.ಗೋಣಿಕೊಪ್ಪ ವರದಿ: ವಿಶ್ವ ಪರಿಸರ ಸಂರಕ್ಷಣಾ ದಿನದ ಅಂಗವಾಗಿ ನಲ್ಲೂರು ಗ್ರಾಮದ ತಲೆಬಲೇಶ್ವರಾ ದೇವಸ್ಥಾನ ಆವರಣದಲ್ಲಿ ಕಾಡುಹಣ್ಣು ಗಿಡ ನೆಡಲಾಯಿತು. ಸಂಪಿಗೆ, ನೆಲ್ಲಿ, ಅಳಂದೆ, ಜಮ್ನೇರಿ ಗಿಡ ನೆಡಲಾಯಿತು. ಬಾಬು ಜಗಜೀವನ್‍ರಾಮ್ ಕಿಸಾನ್ ಸಮ್ಮಾನ್ ಪ್ರಶಸ್ತಿ ವಿಜೇತ ಸೋಮೇಂಗಡ ಗಣೇಶ್ ತಿಮ್ಮಯ್ಯ, ಊರುತಕ್ಕ ಪುಚ್ಚಿಮಾಡ ಲಾಲಾ ಪೂಣಚ್ಚ, ಚೆಟ್ರುಮಾಡ ಗಣೇಶ್ ನಾಚಪ್ಪ, ವಂಶಿತಾ ಗಿಡ ನೆಟ್ಟರು.ಗೋಣಿಕೊಪ್ಪ ವರದಿ: ವಿಶ್ವ ಪರಿಸರ ಸಂರಕ್ಷಣಾ ದಿನದ ಅಂಗವಾಗಿ ಬಿಜೆಪಿ ಕೃಷಿ ಮೋರ್ಚಾ ವತಿಯಿಂದ ವೀರಾಜಪೇಟೆ ತಾಲೂಕಿನಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡಲಾಯಿತು.
ತಾಲೂಕು ವ್ಯಾಪ್ತಿಯ 196 ಬೂತ್ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರುಗಳು ಅವರವರ ಮನೆ ಆವರಣ, ತೋಟ, ಸಾರ್ವಜನಿಕ ಸ್ಥಳಗಳಲ್ಲಿ ತಲಾ ಒಂದೊಂದು ಗಿಡ ನೆಟ್ಟು ಹಸಿರು ಕ್ರಾಂತಿ ಮೂಡಿಸಿದರು. ಹಣ್ಣಿನ ಗಿಡ, ಕಾಡು ಮರ, ಸಾಂಪ್ರದಾಯಿಕ ಮರಗಳ ಗಿಡ ನೆಡಲಾಯಿತು.
ಬಿಜೆಪಿ ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್‍ಕುಮಾರ್ ಬಿರುನಾಣಿ ಶಾಲಾ ಆವರಣದಲ್ಲಿ ಗಿಡ ನೆಟ್ಟರು. ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ ತಿಮಯ್ಯ ಅವರು ತೋಟದಲ್ಲಿ ಕಾಚಂಪುಳಿ ಗಿಡ ನೆಟ್ಟರು. ಸಾಮಾಜಿಕ ಜಾಲತಾಣದ ಮುಖ್ಯಸ್ಥ ಚೆಟ್ಟಂಗಡ ಮಹೇಶ್ ಮಂದಣ್ಣ ನೆಮ್ಮಾಲೆ ಗ್ರಾಮದ ರಸ್ತೆಯ ಬದಿಯಲ್ಲಿ ಗಸಗಸೆ ಗಿಡ ನೆಟ್ಟರು. ಜಿಲ್ಲಾ ಕಾರ್ಯದರ್ಶಿ ಕುಂಞಂಗಡ ಅರುಣ್ ಭೀಮ್ಯಯ ಅವರ ತೋಟದಲ್ಲಿ ಹಲಸಿನ ಗಿಡ ನೆಟ್ಟರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಗಿಡ ನೆಟ್ಟರು.