ವೀರಾಜಪೇಟೆ, ಆ. 1: ವೀರಾಜಪೇಟೆಯ ಫೀಲ್ಡ್ ಮಾರ್ಷಲ್ ರಸ್ತೆಯಲ್ಲಿರುವ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ವರದಿಯಲ್ಲಿ ಪಾಸಿಟಿವ್ ಕಂಡು ಬಂದುದರಿಂದ ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯ ಒತ್ತಾಗಿರುವ ಗಲ್ಲಿಯ ಒಳಭಾಗದ ಒಂದು ಭಾಗದ ಪ್ರದೇಶವನ್ನು (ಸರಸ್ವತಿ ಸ್ಟೋರ್ಸ್‍ನ ಪಕ್ಕದ ಓಣಿಯಿಂದ ಹಿಂಭಾಗ) ಇಲ್ಲಿನ ತಾಲೂಕು ಆಡಳಿತ ಹಾಗೂ ಪ.ಪಂ. ಸೇರಿ ಸೀಲ್‍ಡೌನ್ ಮಾಡಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಿದೆ. ಈ ಪ್ರದೇಶದಲ್ಲಿ 28 ಕುಟಂಬಗಳು, 92 ಜನಸಂಖ್ಯೆ ಇದ್ದು ಎಲ್ಲರನ್ನು ಸಾರ್ವಜನಿಕ ಸಂಪರ್ಕದಿಂದ ತಡೆ ಹಿಡಿಯಲಾಗಿದೆ.