ಸಿದ್ದಾಪುರ , ಆ. 1 : ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟಲು ಪ್ರಯತ್ನಿಸಿದರೂ ಕೂಡ ಕಾಡಾನೆಗಳು ಕಾಫಿ ತೋಟಗಳಿಂದ ಕದಲದೆ ಅರಣ್ಯ ಇಲಾಖೆ ಅಧಿಕಾರಿ ಗಳನ್ನು ಹಾಗೂ ಸಿಬ್ಬಂದಿಗಳನ್ನು ಸುತ್ತಾಡಿಸಿ ಬೆವರಿಳಿಸಿದ ಪ್ರಸಂಗ ಶನಿವಾರದಂದು ನಡೆದಿದೆ. ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆನೆಕಾಡು ವ್ಯಾಪ್ತಿಯ ಅರಣ್ಯ ಸಿಬ್ಬಂದಿ ಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ನೆಲ್ಲಿಹುದಿಕೇರಿ ಬೆಟ್ಟದಕಾಡು ಭಾಗದಲ್ಲಿ ಬೀಡುಬಿಟ್ಟಿದ್ದ 23 ಅಧಿಕ ಕಾಡಾನೆಗಳ ಹಿಂಡುಗಳನ್ನು ಪಟಾಕಿ ಸಿಡಿಸಿ ಕಾಡಿಗೆ ಅಟ್ಟಲು ಪ್ರಯತ್ನಿಸಿದರು ಆದರೆ ಬೆಟ್ಟದಕಾಡು ಕಾಫಿ ತೋಟ ಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ಕಾರ್ಯಾಚರಣೆ ನಡೆಸುವ ಸಂದರ್ಭ ಬೆಟ್ಟದ ಕಾಡಿನಿಂದ ಸ್ಥಳಾಂತರ ಗೊಂಡು ನೇರ ವಾಗಿ ಅತ್ತಿಮಂಗಲದ ಮೇರಿಲ್ಯಾಂಡ್ ಕಾಫಿ ತೋಟಕ್ಕೆ ಲಗ್ಗೆ ಇಟ್ಟವು ಮೇರಿಲ್ಯಾಂಡ್ ಕಾಫಿ ತೋಟದ ಒಳಗೆ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಟಾಕಿ ಸಿಡಿಸಿ ಕಾಡಾನೆ ಗಳನ್ನು ಕಾಡಿಗಟ್ಟಲು ಸಾಕಷ್ಟು ಪ್ರಯತ್ನ ನಡೆಸಿದರೂ ಕೂಡ ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆ ಇಟ್ಟು ಕಾಫಿ ತೋಟದಿಂದ ಕದಲುತ್ತಿರಲಿಲ್ಲ.

ಕಾರ್ಯಾಚರಣೆ ಸಂದರ್ಭದಲ್ಲಿ 5 ಮರಿಯಾನೆಗಳು ಸೇರಿದಂತೆ 23 ಅಧಿಕ ಕಾಡಾನೆಗಳು ಕಾಫಿ ತೋಟಗಳಿಗೆ ಕಂಡುಬಂದವು ಎಂದು ಉಪ ವಲಯ ಅರಣ್ಯಾಧಿಕಾರಿ ಸುಬ್ರಾಯ ತಿಳಿಸಿದರು ಸಂಜೆವರೆಗೂ ಕಾರ್ಯಾಚರಣೆ ನಡೆಸಿದರೂ ಕೂಡ ಕಾಡಾನೆಗಳು ಕಾಫಿ ತೋಟ ಬಿಟ್ಟು ತೆರಳದೆ ಇರುವ ಹಿನ್ನೆಲೆಯಲ್ಲಿ ತಾ. 2 ರಂದು (ಇಂದು) ಬೆಳಗ್ಗಿನಿಂದ ಸಂಜೆವರೆಗೂ ಕಾರ್ಯಾಚರಣೆಯನ್ನು ನಡೆಸ ಲಾಗುವುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ನಡೆದ ಕಾರ್ಯಾಚರಣೆಯ ಸಂದರ್ಭ ಎಸಿಎಫ್ ನೆಹರು ಮಾರ್ಗ ದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯಧಿಕಾರಿ ಅನನ್ಯ ಕುಮಾರ್ ಉಪವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಮಹದೇವ್ ನಾಯಕ್ ಅರಣ್ಯ ರಕ್ಷಕ ಚರಣ್ ಗಣೇಶ್ ರವಿ ಉತ್ನಾಳ್ ದಿನೇಶ್ ಚಾಲಕ ವಾಸು ಹಾಗೂ ಚಂದ್ರ ಆನೆಕಾಡು ಹಾಗೂ ಮೀನು ಕೊಲ್ಲಿ ಭಾಗದ ಆರ್‍ಆರ್‍ಟಿ ತಂಡದ ಸಿಬ್ಬಂದಿ ಗಳು ಸೇರಿದಂತೆ 20 ಮಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

- ವಾಸು