ವೀರಾಜಪೇಟೆ, ಜು.31: ಅಕ್ರಮ ಗಾಂಜಾ ಮಾರಾಟ ಪ್ರಕರಣದಲ್ಲಿ ಹತ್ತೊಂಭತ್ತನೆ ಆರೋಪಿ ಪಿ.ಕೆ.ತನ್ಸಿರ್ ಎಂಬಾತನಿಗೆ ವೀರಾಜಪೇಟೆಯ ಎರಡನೇ ಅಧಿಕ ಸೆಷನ್ಸ್ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶ ಪಿ.ಎಸ್.ಚಂದ್ರಶೇಖರ್ ಅವರು ನಿರೀಕ್ಷಣಾ ಜಾಮೀನು ನೀಡಿದ್ದಾರೆ.
ಕಳೆದ 19-5-2020 ರಂದು ವೀರಾಜಪೇಟೆ ಸುಂಕದಕಟ್ಟೆ ಬಳಿಯ ಪಂಪುಕೆರೆಯ ಖಾಲಿ ಜಾಗದಲ್ಲಿ ಸುಂಕದಕಟ್ಟೆಯ ನಿಶಾರ್ ಅಹಮ್ಮದ್ ಹಾಗೂ ಇಲ್ಲಿನ ಸೆಲ್ವನಗರದ ಸಾಧಿಕ್ ಸೇರಿದಂತೆ 19ಮಂದಿ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರೆಂಬ ಆರೋಪದಡಿ ಜಿಲಾ ್ಲ ಅಪರಾಧ ಪತ್ತೆ ದಳದ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿ 13 ಮಂದಿಯನ್ನು ಬಂಧಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಪ್ರಕರಣದ 19ನೇ ಆರೋಪಿ ತನ್ಸಿರ್ಗೆ ನಿರೀಕ್ಷಣಾ ಜಾಮೀನು ನೀಡಿದ್ದು ವಶ ಪಡಿಸಿಕೊಂಡ ಸೆಲ್ಲಾರಿಯೊಕಾರನ್ನು (ಕೆ.ಎಲ್.58ವಿ9220) ಬಿಡುಗಡೆಗೊಳಿಸುವಂತೆ ಆದೇಶಿಸಿದ್ದಾರೆ. ಆರೋಪಿ ಪರ ವೀರಾಜಪೇಟೆಯ ಬಿ.ರತ್ನಾಕರ ಶೆಟ್ಟಿ ವಕಾಲತು ವಹಿಸಿದ್ದರು.