ಪೆÇನ್ನಂಪೇಟೆ, ಆ. 1: ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗ್ರಾಮದ ಕಾಫಿ ತೋಟಗಳಲ್ಲಿ ಒಂದು ಮರಿಯಾನೆ ಸೇರಿದಂತೆ ಒಟ್ಟು 7 ಕಾಡಾನೆಗಳು ಬೀಡುಬಿಟ್ಟಿದ್ದು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.
ಗ್ರಾಮದ ಕಾಕೆರ ರವಿ ಎಂಬವರ ಕಾಫಿ ತೋಟಕ್ಕೆ ನುಗ್ಗಿ ದಾಂಧಲೆ ನಡೆಸಿರುವ ಪುಂಡಾನೆಗಳು ನೂರಾರು ಬಾಳೆಗಿಡಗಳನ್ನು ತುಳಿದು ನಾಶಮಾಡಿವೆ.
ಕಾಕೆರ ಎಸ್. ಪೂವಯ್ಯ ಅವರ ತೋಟಕ್ಕೂ ನುಗ್ಗಿರುವ ಆನೆಗಳು ಬಾಳೆಗಿಡಗಳನ್ನು ಧ್ವಂಸಗೊಳಿಸಿವೆ.
ಕೊರಕುಟ್ಟಿರ ಸರ ಚಂಗಪ್ಪ ಅವರ ಕೆರೆ ಹಾಗೂ ನೀರಿನ ಮೋಟಾರ್ಗೂ ಹಾನಿ ಮಾಡಿರುವ ಆನೆಗಳು ಮತ್ತೂರಿನ ಇನ್ನೂ ಹಲವು ತೋಟ ಹಾಗೂ ಗದ್ದೆಗಳಲ್ಲೂ ದಾಂಧಲೆ ನಡೆಸಿವೆ.
ಸ್ಥಳಕ್ಕೆ ರೈತ ಸಂಘದವರು, ಗ್ರಾಮಸ್ಥರು ಆಗಮಿಸಿ ಆನೆಗಳನ್ನು ಕೂಡಲೇ ಕಾಡಿಗಟ್ಟುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದರು.
ರೈತ ಸಂಘದ ಪೆÇನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೇಮಾಡ ಮಂಜುನಾಥ್ ಮಾತನಾಡಿ ಕಾಡಾನೆಗಳ ಉಪಟಳದಿಂದಾಗಿ ನಷ್ಟಕ್ಕೊಳಗಾಗಿರುವ ರೈತರಿಗೆ ಸೂಕ್ತ ಪರಿಹಾರವನ್ನು ನೀಡಬೇಕು. ಅರಣ್ಯ ಇಲಾಖೆ ಕೊಡಲೇ ಆನೆಗಳನ್ನು ಕಾಡಿಗಟ್ಟಬೇಕು ಒಂದು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಪೆÇನ್ನಂಪೇಟೆ ವಲಯ ಅರಣ್ಯಾಧಿಕಾರಿ ಅರಮಣಮಾಡ ತೀರ್ಥ ಪೆÇನ್ನಂಪೇಟೆ ಅರಣ್ಯ ವಲಯ ಹಾಗೂ ತಿತಿಮತಿ ಅರಣ್ಯ ವಲಯ ಸಿಬ್ಬಂದಿಗಳು ಸೇರಿ ಜಂಟಿ ಕಾರ್ಯಾಚರಣೆಯ ಮೂಲಕ ಆನೆಗಳನ್ನು ಕಾಡಿಗಟ್ಟುವ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಈ ಸಂಧರ್ಭ ಡಿವೈಆರ್ ಎಫ್ಓ.ಗಳಾದ ದಿವಾಕರ್ ಹಾಗೂ ರವಿಕಿರಣ್, ಪೆÇನ್ನಂಪೇಟೆ ಹೋಬಳಿ ರೈತ ಸಂಘದ ಸಂಚಾಲಕ ಚೊಟ್ಟೆಕಾಳಪ್ಪಂಡ ಮನು, ಕಿರುಗೂರು ಗ್ರಾ. ಪಂ. ಸದಸ್ಯ ಪಿ. ಗಿರೀಶ್, ರೈತ ಮುಖಂಡರಾದ ಚೀರಂಡ ದಿನು, ಕಾಕೆರ ರವಿ, ಜಿ. ಉತ್ತಪ್ಪ, ಕಾಕೆರ ಮಂಜುನಾಥ್, ಸಿ. ಮಧು, ಪಿ. ಕಾರ್ಯಪ್ಪ, ಸಂತು, ಮಹೇಶ್, ದೇವಯ್ಯ, ಕಾಕೆರ ಪೂಣಚ್ಚ, ಫಾರೆಸ್ಟ್ ಗಾರ್ಡ್ ಚೌಡಪ್ಪ ನಾಯಕ ಜಡ್ಡಿಮನಿ ಹಾಗೂ ಆರ್ ಆರ್ ಟಿ ಸಿಬ್ಬಂದಿ ಇದ್ದರು. -ಚನ್ನನಾಯಕ