ಆರೋಪಿಗಳ ಬಂಧನ

ವೀರಾಜಪೇಟೆ, ಜು. 30: ಅಕ್ರಮವಾಗಿ ಜೂಜುವಿನಲ್ಲಿ ತೊಡಗಿಸಿಕೊಂಡು 12 ಮಂದಿ ಬಂಧನವಾದ ಘಟನೆ ವೀರಾಜಪೇಟೆ ನಗರದಲ್ಲಿ ನಡೆದಿದೆ.

ವೀರಾಜಪೇಟೆ ದೊಡ್ಡಟಿ ಚೌಕಿಯ ಸನಿಹದ ಅಂಗಡಿಯೊಂದರಲ್ಲಿ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಚೀಟಿಯ ಕೊನೆಯ ಮೂರು ಸಂಖ್ಯೆಗಳ ಮೇಲೆ ಅದೃಷ್ಟ ಸಂಖ್ಯೆ ಹೆಸರಿನಲ್ಲಿ ಹಣ ಹೂಡಿ ಜೂಜಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅಂಗಡಿಯ ಮೇಲೆ ದಾಳಿ ನಡೆಸಿದ ವೀರಾಜಪೇಟೆ ಡಿ.ವೈ.ಎಸ್.ಪಿ. ಸಿ.ಟಿ. ಜಯಕುಮಾರ್ ನೇತೃತ್ವದ ತಂಡ ಒಟ್ಟು 92,000 ನಗದನ್ನು ಹಾಗೂ 12 ಮಂದಿಯನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದೆ.

ನಗರ ಠಾಣಾಧಿಕಾರಿ ಹೆಚ್.ಎಸ್. ಭೋಜಪ್ಪ, ಸಿಬ್ಬಂದಿಗಳಾದ ಲೋಕೇಶ್, ಗಿರೀಶ್, ಮುಸ್ತಫಾ, ಸಂತೋಷ್, ಪ್ರವೀಣ್ ಮತ್ತು ಚಾಲಕ ಯೋಗೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.