ಮಡಿಕೇರಿ, ಜು. 29: ಜಿಲ್ಲೆಯಲ್ಲಿ ಹೊಸದಾಗಿ 18 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಓರ್ವ ಮೃತಪ್ಪಟ್ಟಿದ್ದಾರೆ. ಇದುವರೆಗೆ 374 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 272 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 7 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, 95 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಾದ್ಯಂತ 84 ನಿಯಂತ್ರಿತ ವಲಯಗಳಿವೆ.
ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಇಂದು ವ್ಯಕ್ತಿಯೊಬ್ಬರು ಸಾವನ್ನಪ್ಪುವುದರೊಂದಿಗೆ ಇದುವರೆಗೆ ಒಟ್ಟು 7 ಮಂದಿ ಮರಣಹೊಂದಿದ್ದಾರೆ. ಮೂಲತಃ ಮೂರ್ನಾಡು ಸಮೀಪದ ಹೊದ್ದೂರುವಿನ 38 ವರ್ಷದ ಈ ವ್ಯಕ್ತಿ ನಗರದಲ್ಲಿ ದಿನಸಿ ವ್ಯಾಪಾರ ನಡೆಸುವುದರೊಂದಿಗೆ ಸಹಕಾರ ಸಂಘವೊಂದರಲ್ಲಿ ಉದ್ಯೋಗಿ ಆಗಿದ್ದರೆಂದು ತಿಳಿದು ಬಂದಿದೆ.
ತಾ. 21 ರಂದು ಜ್ವರ ಕಾಣಿಸಿಕೊಂಡಿದ್ದ ಇವರು ಖಾಸಗಿ ಚಿಕಿತ್ಸಾಲಯವೊಂದರಲ್ಲಿ ಔಷಧೋಪಚಾರ ಪಡೆಯುತ್ತಿದ್ದುದಾಗಿ ಗೊತ್ತಾಗಿದೆ. ಅಲ್ಲದೆ ತಾ. 26 ರಂದು ಜಿಲ್ಲಾ ಸರಕಾರಿ ವೈದ್ಯಕೀಯ ಕೋವಿಡ್-19 ಆಸ್ಪತ್ರೆಗೆ ತೀವ್ರ ಅನಾರೋಗ್ಯದಿಂದ ದಾಖಲಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ರೋಗಿಗೆ ತೀವ್ರವಾದ ಜ್ವರ, ಕೆಮ್ಮು, ಸುಸ್ತು ಕಾಣಿಸಿಕೊಂಡ ಮೇರೆಗೆ ಗಂಟಲು ಹಾಗೂ ಮೂಗು ದ್ರವ ಮಾದರಿ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಕಂಡುಬಂದಿದೆ. ಆ ಮೇರೆಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಿದ್ದು, ಈ ಸಂಜೆ ಮೃತರಾಗಿದ್ದಾರೆ.
ಮೃತ ವ್ಯಕ್ತಿ ನಗರದ ಐಟಿಐ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು, ಪತ್ನಿ, ಓರ್ವ ಪುತ್ರಿ ಹಾಗೂ ಪುಟ್ಟ ಗಂಡು ಮಗುವನ್ನು ಅಗಲಿದ್ದಾರೆ.
ಇನ್ನುಳಿದ ಪ್ರಕರಣಗಳ ವಿವರ
ಮಡಿಕೇರಿಯ ಅಶ್ವಿನಿ ಆಸ್ಪತ್ರೆಯ ಹಿಂಭಾಗದ 74 ವರ್ಷದ ಪುರುಷ, ಮಡಿಕೇರಿಯ ಕಣರ್ಂಗೇರಿ ಗ್ರಾಮದ 3ನೇ ಮೈಲಿನ 32 ವರ್ಷದ ಪುರುಷ, ಸಿದ್ದಾಪುರದಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 45, 38 ವರ್ಷದ ಮಹಿಳೆಯರಿಗೆ, 15 ಮತ್ತು 9 ವರ್ಷದ ಬಾಲಕರಿಗೆ ಸೋಂಕು ದೃಢಪಟ್ಟಿದೆ. ಮಡಿಕೇರಿಯ ಅಶ್ವಿನಿ ಆಸ್ಪತ್ರೆ ಹಿಂಭಾಗದಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 45 ವರ್ಷದ ಪುರುಷ, ಸೋಮವಾರಪೇಟೆ ತಾಲೂಕಿನ ಅಭ್ಯತ್‍ಮಂಗಲದ ಜ್ಯೋತಿನಗರದಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 49 ವರ್ಷದ ಮಹಿಳೆ, ಸೋಮವಾರಪೇಟೆ ತಾಲೂಕಿನ ರಂಗಸಮುದ್ರದ ಬೆಟ್ಟ್ಟಗೇರಿಯ 58 ವರ್ಷದ ಪುರುಷ, ನಾಪೆÇೀಕ್ಲು ಬಳಿಯ ಎಮ್ಮೆಮಾಡುವಿನ 39 ವರ್ಷದ ಪುರುಷ, ಮಡಿಕೇರಿಯ ಕಾರುಗುಂದದ ಕಡಿಯತ್ತೂರಿನ 60 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ವೀರಾಜಪೇಟೆಯ ಕುಕ್ಲೂರು ಗ್ರಾಮದ 43 ವರ್ಷದ ಮಹಿಳೆ, 15 ವರ್ಷದ ಬಾಲಕಿ.
(ಮೊದಲ ಪುಟದಿಂದ) ಕಾಕೋಟುಪರಂಬುವಿನ 64 ವರ್ಷದ ಮಹಿಳೆ. ಗೋಣಿಕೊಪ್ಪದ ಚೆನ್ನಂಗೊಲ್ಲಿಯ 34 ವರ್ಷದ ಮಹಿಳೆ. ವೀರಾಜಪೇಟೆಯ ಬೇತ್ರಿಯ 35 ವರ್ಷದ ಮಹಿಳೆ, ಸೋಮವಾರಪೇಟೆ ತಾಲೂಕಿನ ಚಿಕ್ಕಅಳುವಾರದ 48 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಹೊಸ ನಿಯಂತ್ರಿತ ಪ್ರದೇಶಗಳು
ಅಶ್ವಿನಿ ಆಸ್ಪತ್ರೆ ಹಿಂಭಾಗ, ಐಟಿಐ ಹಿಂಭಾಗ, ಕರ್ಣಂಗೇರಿ ಗ್ರಾಮದ ಮೂರನೇ ಮೈಲು, ರಂಗಸಮುದ್ರ, ಎಮ್ಮೆಮಾಡು, ಕಾರುಗುಂದ, ಚೆನ್ನಂಗೊಲ್ಲಿ, ಕಾಕೋಟುಪರಂಬು, ಬೇತ್ರಿ ಹಾಗೂ ಚಿಕ್ಕಳವಾರಗಳಲ್ಲಿನ ಕಂಟೈನ್‍ಮೆಂಟ್ ವಲಯಗಳನ್ನು ತೆರೆಯಲಾಗಿದೆ.
ನಿಯಂತ್ರಿತ ಪ್ರದೇಶಗಳ ತೆರವು
ಆರ್ಜಿ, ಕುಶಾಲನಗರದ ಬೈಚನಹಳ್ಳಿ, ಗೋಣಿಕೊಪ್ಪದ ಅಚ್ಚಪ್ಪ ಲೇಔಟ್, ಲಕ್ಕುಂದ, ಮಡಿಕೇರಿಯ ಮುನೀಶ್ವರ ದೇವಸ್ಥಾನದ ಬಳಿ ಹಾಗೂ ಸುಂಟಿಕೊಪ್ಪದ ಎಮ್ಮೆಗುಂಡಿ ರಸ್ತೆಯ ಬಳಿಯ ನಿಯಂತ್ರಿತ ಪ್ರದೇಶಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.