ಸೋಮವಾರಪೇಟೆ, ಜು. 28: ಕೊರೊನಾ ಸೋಂಕು ಹರಡುವ ಬಗ್ಗೆ ವ್ಯಾಪಕ ಜಾಗೃತಿಯ ನಡುವೆಯೂ ಮಾಸ್ಕ್ ಧರಿಸದೆ ಪಟ್ಟಣದಲ್ಲಿ ಸಂಚರಿಸುತ್ತಿದ್ದ ಮಂದಿಗೆ ಪೊಲೀಸರು ದಂಡ ವಿಧಿಸಿ ಎಚ್ಚರಿಕೆ ನೀಡಿದರು.

ಸಂತೆ ದಿನವಾದ ಇಂದು ಒಟ್ಟು 19 ಮಂದಿಗೆ ದಂಡ ವಿಧಿಸಲಾಯಿತು. ಕೋವಿಡ್ 19ರ ಹಿನ್ನೆಲೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವದನ್ನು ಕಡ್ಡಾಯಗೊಳಿಸಿದ್ದರೂ ಸಹ, ಆದೇಶವನ್ನು ಉಲ್ಲಂಘಿಸಿ ಬೇಜವಾಬ್ದಾರಿ ತೋರಿದ ಮಂದಿಗೆ ತಲಾ 100 ರಂತೆ ದಂಡ ವಿಧಿಸಲಾಗಿದೆ. ಆ ಮೂಲಕ ಸಾರ್ವಜನಿಕ ವಲಯದಲ್ಲಿ ಮತ್ತೊಮ್ಮೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪೊಲೀಸ್ ಸಿಬ್ಬಂದಿ ಉಮೇಶ್ ತಿಳಿಸಿದರು.