ವೀರಾಜಪೇಟೆ, ಜು. 28: ಸಾರ್ವಜನಿಕರು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್‍ಗಳೊಂದಿಗೆ ಕೈ ಜೋಡಿಸಬೇಕು ಎಂದು ಪ.ಪಂ. ಅಭಿಯಂತರ ಎಂ.ಎನ್. ಹೇಮ್‍ಕುಮಾರ್ ಹೇಳಿದರು.

ವೀರಾಜಪೇಟೆ ಪುರಭವನದಲ್ಲಿ ಪಟ್ಟಣ ಪಂಚಾಯಿತಿಯಿಂದ ಆಯೋಜಿಸಿದ್ದ ಒಂದು, ಎರಡು, ಮೂರು ಹಾಗೂ ಎಂಟು ವಾರ್ಡ್‍ಗಳ ಪ್ರತ್ಯೇಕವಾದ ಕೊರೊನಾ ಜಾಗೃತಿ ಸಮಿತಿ ರಚನೆಯ ಕುರಿತು ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ: ವಿಶ್ವನಾಥ್ ಸಿಂಪಿ ಮಾತನಾಡಿ, ಸಾರ್ವಜನಿಕವಾಗಿ ಆರೋಗ್ಯ ಕಾಪಾಡಲು ಇಂತಹ ವಾರ್ಡ್‍ಮಟ್ಟದ ಕೊರೊನಾ ಜಾಗೃತಿ ಸಮಿತಿ ರಚನೆ ಅಗತ್ಯ ಎಂದರು.

ಎರಡನೇ ವಾರ್ಡ್‍ನ ಸದಸ್ಯ ಪಟ್ಟಡ ರಂಜಿ ಪೂಣಚ್ಚ ಮಾತನಾಡಿ, ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸು ವುದು ಇಂದಿನ ಪರಿಸ್ಥಿತಿಯಲ್ಲಿ ಅತÀ್ಯವಶ್ಯಕ ಎಂದರು.

ಮೂರನೇ ವಾರ್ಡ್‍ನ ಡಿ.ಪಿ. ರಾಜೇಶ್ ಮಾತನಾಡಿ, ಇಂದಿನ ಕೊರೊನಾ ವಾರಿಯರ್ಸ್ ಅವರೊಂದಿಗೆ ಕೊರೊನಾ ಜಾಗೃತಿ ಸಮಿತಿ ಸಹಾಯ ಅಗತ್ಯವೆಂದರು.

ಒಂದನೇ ವಾರ್ಡ್‍ನ ಸದಸ್ಯೆ ಫಸಿಹ:ತಬ್ಸಮ್ ಹಾಗೂ ಎಂಟನೇ ವಾರ್ಡ್‍ನ ಬೆನ್ನಿ ಸಬಾಸ್ಟಿನ್ ಹಾಜರಿದ್ದು, ಸಲಹೆ ಸೂಚನೆಗಳನ್ನು ನೀಡಿದರು.

ಒಂದನೇ ವಾರ್ಡ್‍ನಿಂದ ಸದಸ್ಯೆ ಫಸಿಹ:ತಬ್ಸಮ್ ಉಸ್ತುವಾರಿಯಲ್ಲಿ ಮನ್ಸೂರ್ ಅಹಮ್ಮದ್, ಟಿ.ವಿ. ಅನಿಲ್‍ಕುಮಾರ್, ಜೋಶಿ, ಎರಡನೇ ವಾರ್ಡ್ ಉಸ್ತುವಾರಿ ಪಟ್ಟಡ ರಂಜಿ ಪೂಣಚ್ಚ, ದಿವ್ಯ, ಪೂವಮ್ಮ, ಪೊನ್ನಕ್ಕಿ, ಮೂರನೇ ವಾರ್ಡ್‍ಗೆ ಡಿ.ಪಿ. ರಾಜೇಶ್ ಉಸ್ತುವಾರಿಯಲ್ಲಿ ಟಿ.ಪಿ. ಲಕ್ಷ್ಮಣ್, ಮದನ್, ಅನೀಶ್, ಎಂಟನೇ ವಾರ್ಡ್‍ಗೆ ಬೆನ್ನಿ ಸೆಬಾಸ್ಟಿನ್ ಉಸ್ತುವಾರಿಯಲ್ಲಿ ಬಿ.ಡಿ. ಸುನೀತಾ, ಪಿ.ಜೆ. ರಾಯ್, ಎಂ. ಸುನಿತಾ ಇವರು ಗಳನ್ನು ಆಯ್ಕೆ ಮಾಡಲಾಯಿತು.