ವೀರಾಜಪೇಟೆ, ಜು. 28: ವೀರಾಜಪೇಟೆ ನೆಹರೂ ನಗರದ ಏಳನೇ ಬ್ಲಾಕ್‍ನಲ್ಲಿ ಕಳೆದ ಮಳೆಗಾಲದಲ್ಲಿ ಕುಸಿದ ತಡೆಗೋಡೆ ಕಾಮಗಾರಿಯನ್ನು ಸರಕಾರದ ಅನುದಾನದಿಂದ ಆರಂಭಿಸಬೇಕೆನ್ನು ವಷ್ಟರಲ್ಲಿ ಕೊರೊನಾ ವೈರಸ್‍ನ ನಿರ್ಬಂಧದಿಂದಾಗಿ ಕಾರ್ಮಿಕರು ತವರಿಗೆ ತೆರಳಿದ್ದರಿಂದ ಕಾಮಗಾರಿಗೆ ಟೆಂಡರ್ ಕರೆದರೂ ಕಾರ್ಮಿಕರ ಅಭಾವದಿಂದ ಕಾಮಗಾರಿ ನಿರ್ವಹಿಸಲಾಗಿಲ್ಲ.
ಇದೀಗ ಸದ್ಯದ ಪರಿಸ್ಥಿತಿಗೆ ತಡೆಗೋಡೆ ಕುಸಿಯದಂತೆ ಕೆಳಗಿರುವ ಮನೆಗಳಿಗೆ ಹಾಗೂ ಸುತ್ತ ಮುತ್ತಲ ಮನೆಗಳಿಗೆ ಹಾನಿ ಸಂಭವಿಸ ದಂತೆ ಸುಮಾರು ಸಾವಿರಕ್ಕೂ ಅಧಿಕ ಮರಳು ಚೀಲಗಳನ್ನು ಜೋಡಿಸಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಈ ವ್ಯಾಪ್ತಿಯ ಪ.ಪಂ. ಸದಸ್ಯೆ ಎಂ.ಕೆ. ದೇಚಮ್ಮ ಹಾಗೂ ಅಲ್ಲಿನ ನಿವಾಸಿಗಳಾದ ಶಬನಾ, ಮೊಹಿಸಿನ್, ಸಿಕಂದರ್ ಹಾಗೂ ಯೂನಸ್ ತಿಳಿಸಿದ್ದಾರೆ. ನಾಲ್ಕು ಲಕ್ಷ ವೆಚ್ಚದಲ್ಲಿ ತಾತ್ಕಾಲಿಕ ಪರಿಹಾರದ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಪಂಚಾಯಿತಿ ಅಭಿಯಂತರ ಎಂ.ಪಿ. ಹೇಮ್‍ಕುಮಾರ್ ತಿಳಿಸಿದ್ದಾರೆ.