ಸೋಮವಾರಪೇಟೆ, ಜು. 27: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸೋಮವಾರಪೇಟೆ ಪಟ್ಟಣದ ಸಂತೆಯನ್ನು ರದ್ದುಗೊಳಿಸಿದ್ದರೂ, ರಸ್ತೆ ಬದಿಯಲ್ಲಿ ತರಕಾರಿ ಮಾರಾಟಕ್ಕೆ ಮುಂದಾಗಿದ್ದ ಕೆಲ ವ್ಯಾಪಾರಿಗಳಿಗೆ ಪೊಲೀಸರು ಲಾಟಿ ರುಚಿ ತೋರಿಸಿದರು.

ಸಂತೆ ದಿನವಾದ ಇಂದು ಬೆಳಿಗ್ಗೆ ಹೈಟೆಕ್ ಮಾರುಕಟ್ಟೆಯ ಸುತ್ತಮುತ್ತ ತರಕಾರಿ ಮಾರಾಟ ಪ್ರಾರಂಭವಾದಂತೆ ಜನಸಂದಣಿ ಹೆಚ್ಚಾಯಿತು. ಅಂಗಡಿಗಳನ್ನು ತೆರವುಗೊಳಿಸಲು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ನಾಚಪ್ಪ ಹಾಗು ಸಿಬ್ಬಂದಿಗಳು ಮುಂದಾದರೂ ಯಾವದೇ ಪ್ರಯೋಜನವಾಗಲಿಲ್ಲ. ನಂತರ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿಗಳು ತರಕಾರಿ ಅಂಗಡಿಗಳನ್ನು ತೆರವುಗೊಳಿಸುವಂತೆ ತಿಳಿಹೇಳಿದರು. ಕೆಲ ವ್ಯಾಪಾರಸ್ಥರು ಉಡಾಫೆ ತೋರಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಬೀಸಿದರು. ಪೊಲೀಸರ ವಿರುದ್ಧ ತಿರುಗಿ ಬಿದ್ದ ವ್ಯಾಪಾರಿಗಳ ತರಕಾರಿಗಳನ್ನು ಪಟ್ಟಣ ಪಂಚಾಯಿತಿಯ ಟ್ಯಾಕ್ಟರ್‍ಗೆ ತುಂಬಿಸಿ ಹೊರಭಾಗಕ್ಕೆ ಸಾಗಿಸಲಾಯಿತು.