ಸಿದ್ದಾಪುರ, ಜು.27: ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಸಂದರ್ಭ ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ ಮೂವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನೆಲ್ಯಹುದಿಕೇರಿ ಗ್ರಾಮದ ಕುಂಬಾರಗುಂಡಿ ಎಂಬಲ್ಲಿಂದ ಸೋಮವಾರದಂದು ಸಂಜೆ ಅಕ್ರಮವಾಗಿ ಕೂಡುಗದ್ದೆ ಎಂಬಲ್ಲಿಗೆ ಗೋ ಸಾಗಾಟ ಮಾಡುತ್ತಿರುವ ಖಚಿತ ಸುಳಿವಿನ ಮೇರೆಗೆ ಸಿದ್ದಾಪುರ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಕೂಡುಗದ್ದೆ ನಿವಾಸಿಗಳಾದ ಉಮೇಶ, ಲಂಕೇಶ್ ಆಲಿಯಾಸ್ ದೊರೆ ಹಾಗೂ ರಶೀದ್ ಎಂಬ ಮೂವರನ್ನು ಬಂಧಿಸಿ ಗೋವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.