ಮಡಿಕೇರಿ, ಜು. 26: ನಗರದ ಕಾವೇರಿ ಹಾಲ್ ಎದುರಿನ ಲಾಡ್ಜ್ ವೊಂದರಲ್ಲಿ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಬೆಂಗಳೂರಿನ ನಾಲ್ವರಿಗೆ ವಸತಿ ಕಲ್ಪಿಸಿದ ಮೇರೆಗೆ ನಗರಸಭೆ ಹಾಗೂ ಸ್ಥಳೀಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಕೊರೊನಾ ಸೋಂಕು ತಡೆ ಕಾಯ್ದೆಯಡಿ ಪೊಲೀಸ್ ಕಾಯ್ದೆ 269 ಹಾಗೂ 270ರ ಅಡಿಯಲ್ಲಿ ಹೊಟೇಲ್ ರಾಜ್ ಲಾಡ್ಜ್ ಮಾಲೀಕ ರಾಮರಾಜ್ ಹಾಗೂ ಸಿಬ್ಬಂದಿ ಅನ್ಸರ್ ವಿರುದ್ಧ ಪ್ರಕರಣ ದಾಖಲಾಗಿದೆ. ನಿಯಮ ಉಲ್ಲಂಘಿಸಿ ಎರಡು ಜೋಡಿಗೆ ವಸತಿ ಕಲ್ಪಿಸಿದ್ದ ಮೇರೆಗೆ ನಗರಸಭೆಯ ರೀತುಸಿಂಗ್ ನೀಡಿರುವ ದೂರಿನ ಮೇರೆಗೆ ಕ್ರಮ ಜರುಗಿಸಲಾಗಿದೆ. ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿಕಾರಿ ಎಂ.ಟಿ. ಅಂತಿಮ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.