ಸುಂಟಿಕೊಪ್ಪ, ಜು.26: ಸುಂಟಿಕೊಪ್ಪ ಶಿವರಾಂ ರೈ ಬಡಾವಣೆಯಲ್ಲಿ ಬಾಲಕನೋರ್ವನಿಗೆ ಕೊರೊನಾ ಸೊಂಕು ಪತ್ತೆಯಾಗಿದ್ದು ಆ ಪ್ರದೇಶವನ್ನು ಅಧಿಕಾರಿಗಳು ಸೀಲ್ಡೌನ್ಗೊಳಿಸಿದರು.
ಸುಂಟಿಕೊಪ್ಪ 1ನೇ ವಿಭಾಗದ ಶಿವರಾಂ ಬಡಾವಣೆಯ 12 ವರ್ಷದ ಬಾಲಕನೋರ್ವನಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಗ್ರಾ.ಪಂ.ಪಿಡಿಓ ವೇಣುಗೋಪಾಲ್, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಜೀವನ್, ಸಹಾಯಕ ಚಂದ್ರೇಶ್, ಕಂದಾಯ ಪರಿವೀಕ್ಷಕ ಶಿವಪ್ಪ ಗ್ರಾಮಲೆಕ್ಕಿಗ ನಾಗೇಂದ್ರ, ಎ.ಎಸ್.ಐ.ಶ್ರೀನಿವಾಸ್, ಮುಖ್ಯಪೇದೆ ವಿಜಯಕುಮಾರ್, ಪಂಚಾಯಿತಿ ಸಿಬ್ಬಂದಿಗಳಾದ ಪುನೀತ್ ಕುಮಾರ್,ಡಿ.ಎಂ. ಮಂಜುನಾಥ್, ಶ್ರೀನಿವಾಸ್, ಪೌರಕಾರ್ಮಿಕರು ಬಡಾವಣೆಗೆ ತೆರಳಿ ಸೀಲ್ಡೌನ್ಗೊಳಿಸಿ ಸ್ಯಾನಿಟೈಸರ್ ಗೊಳಿಸಲಾಯಿತು 50 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಿತ ಪ್ರದೇಶವೆಂದು ಬ್ಯಾರಿಕೇಡ್ ಅಳವಡಿಸಿ ಸೀಲ್ಡೌನ್ಗೊಳಿಸಲಾಗಿದೆ.