ಗೋಣಿಕೊಪ್ಪಲು, ಜು. 26 : ಜುಲೈ ತಿಂಗಳ ಕೊನೆಯ ದಿನ ಹಾಗೂ ಆಗಸ್ಟ್ ತಿಂಗಳ ಮೊದಲನೆಯ ದಿನ ನಡೆಯಲಿರುವ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯು ಗೋಣಿಕೊಪ್ಪಲು ವೃತ್ತ ನಿರೀಕ್ಷಕರ ಕಚೇರಿ ಆವರಣದಲ್ಲಿ ನಡೆಯಿತು.
ಸಿಪಿಐ ರಾಮರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಕ್ರೀದ್ ಹಬ್ಬದ ಸಂದರ್ಭ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಕೋವಿಡ್ - 19 ನಿಯಮಗಳನ್ನು ಪಾಲಿಸುವ ಮೂಲಕ ಮುಸ್ಲಿಂ ಭಾಂದವರು ಹಬ್ಬವನ್ನು ಆಚರಿಸ ಬೇಕು, ಪ್ರಾರ್ಥನೆ ಸಲ್ಲಿಸುವ ಸಂದರ್ಭ ಕೇವಲ 50 ಮಂದಿಗೆ ಏಕ ಕಾಲದಲ್ಲಿ ಅವಕಾಶ ಕಲ್ಪಿಸಬೇಕು,ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ನಿರ್ಧರಿಸಲಾಯಿತು.
ಸ್ಯಾನಿಟೈಸ್ ಬಳಸುವ ಮೂಲಕ ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು, ಪ್ರಾರ್ಥನೆ ವೇಳೆ ಅನಾವಶ್ಯಕವಾಗಿ ಜನರು ಹೆಚ್ಚಾಗಿ ಗುಂಪು ಸೇರುವುದು ತಡೆಗಟ್ಟಲು ಸಮುದಾಯದ ಮುಖಂಡರು ಅತ್ಯಂತ ಎಚ್ಚರಿಕೆ ವಹಿಸುವಂತೆ ಸಿಪಿಐ ರಾಮರೆಡ್ಡಿ ತಿಳಿಸಿದರು.
ಸಭೆಯಲ್ಲಿ ಗೋಣಿಕೊಪ್ಪ ಪೆÇಲೀಸ್ ಠಾಣಾಧಿಕಾರಿ ಸುರೇಶ್ ಬೋಪಣ್ಣ,ಪೆÇನ್ನಂಪೇಟೆ ಪೆÇಲೀಸ್ ಠಾಣಾಧಿಕಾರಿ ಡಿ.ಕುಮಾರ್, ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಕ್ಕಿಮ್,ಮುಖಂಡರಾದ ಅಬ್ದುಲ್ ಸಮ್ಮದ್, ಪೆÇನ್ನಂಪೇಟೆ ಶಾಫಿ ಜುಮ್ಮಾ ಮಸೀದಿಯ ಕಾರ್ಯದರ್ಶಿ ಅಜೀಜ್,ಆಶ್ರಪ್, ಅನಫಿಯಾ ಮಸೀದಿಯ ಮೌಸೀನ್, ಹಳ್ಳಿಗಟ್ಟುವಿನ ಅಬುಬಕ್ಕರ್,ಅಬ್ದುಲ್ ಹಮೀದ್, ಹಿಂದೂ ಸಂಘಟನೆಯ ಸುಬ್ರಮಣಿ, ಸುರೇಶ್ ರೈ ಸೇರಿದಂತೆ ಇನ್ನಿತರು ಹಾಜರಿದ್ದರು.