ಸೋಮವಾರಪೇಟೆ, ಜು.26: ಇಲ್ಲಿನ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ಯಜ್ಞ ಪವಿತ್ರೋಧಾರಣೆ ಉಪಾಕರ್ಮ ಕಾರ್ಯಕ್ರಮ ನಡೆಯಿತು.
ಮಹಾಮಾರಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸಮಿತಿ ಸದಸ್ಯರು ಮಾತ್ರ ನೂತನ ಪವಿತ್ರ ಜನಿವಾರ ಧರಿಸಿದರು. ಸಮಾಜ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ಯಜ್ಞೋಪವಿತ್ರಧಾರಣೆ ಮಾಡಿ ಎಂದು ಆಡಳಿತ ಮಂಡಳಿ ಮನವಿ ಮಾಡಿತ್ತು.
ದೇವಾಲಯದ ಪ್ರಧಾನ ಅರ್ಚಕ ಚಿತ್ರಕುಮಾರ್ ಭಟ್ ಕಾರ್ಯಕ್ರಮದ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭ ಅಧ್ಯಕ್ಷ ಎಸ್. ಆರ್. ಶ್ರೀನಿವಾಸ್, ಕಾರ್ಯದರ್ಶಿ ಎಸ್.ಡಿ. ವಿಜೇತ್, ಪದಾಧಿಕಾರಿಗಳಾದ ಸುದರ್ಶನ್, ಕೌಶಿಕ್, ಯಡೂರು ಹರೀಶ್, ರಾಜೇಶ್ ಪದ್ಮನಾಭ, ರವಿಶಂಕರ್ ಉಪಸ್ಥಿತರಿದ್ದರು.