ನಾಪೆÇೀಕ್ಲು, ಜು. 26: ಕಗ್ಗೋಡ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರದಿಂದ ಉಚಿತವಾಗಿ ನೀಡಲಾದ ಪಠ್ಯಪುಸ್ತಕ ಮತ್ತು ಮಕ್ಕಳಿಗೆ 37 ದಿನಗಳಿಗೆ ಸರಕಾರದಿಂದ ನೀಡುವ ಅಕ್ಕಿ ಮತ್ತು ತೊಗರಿ ಬೇಳೆ, ಮಾಸ್ಕ್‍ಗಳನ್ನು ತಾಲೂಕು ಪಂಚಾಯಿತಿ ಸದಸ್ಯೆ ಕುಮುದಾ ರಶ್ಮಿ ವಿತರಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಜಯಶ್ರೀ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಅಮಿತಾ ಕೆ.ಬಿ, ಶಿಕ್ಷಕ ರಾಜೇಶ್ ಪಿ.ಆರ್. ಹಾಗೂ ಪೆÇೀಷಕರು ಹಾಜರಿದ್ದರು.
ದೊಡ್ಡಕೊಡ್ಲಿ
ಶನಿವಾರಸಂತೆ: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ದೊಡ್ಡಕೊಡ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರದ ಉಚಿತ ಪಠ್ಯಪುಸ್ತಕಗಳನ್ನು ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ವಿತರಣೆ ಮಾಡಿದರು.