ಕೂಡಿಗೆ, ಜು. 26: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ದಂಡಿನಮ್ಮ ದೇವಾಲಯ ಆವರಣದಲ್ಲಿನ ರಸ್ತೆ ಮತ್ತು ಅದರ ಸುತ್ತಲೂ ತಡೆಗೊಡೆ ಸೇರಿದಂತೆ ವಿವಿಧ ಕಾಮಗಾರಿಗಳು ಪ್ರಗತಿ ಹಂತದಲ್ಲಿದೆ.
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕಾರ್ಯಕ್ರಮ ನಿಮಿತ್ತ ಕೂಡಿಗೆಗೆ ಬಂದ ಸಂದರ್ಭ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿದ ಶಾಸಕರು ನೀರಾವರಿ ಇಲಾಖೆ ಮೂಲಕ ವಿಶೇಷ ಪ್ಯಾಕೇಜ್ 30 ಲಕ್ಷ ರೂ. ವೆಚ್ಚದ ಅನುದಾನದಿಂದ ದೇವಾಲಯಕ್ಕೆ ಹೋಗುವ ದಾರಿ ಸೇರಿದಂತೆ ದೇವಾಲಯದ ಸುತ್ತಲೂ ತಡೆಗೋಡೆ ಕಾಮಗಾರಿಗಳು ನಡೆಯುತ್ತಿವೆ.