ಚೆಟ್ಟಳ್ಳಿ, ಜು. 26: ಭಾರತೀಯ ಜನತಾ ಪಾರ್ಟಿ ವತಿಯಿಂದ ಚೆಟ್ಟಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷರಾದ ಬಲ್ಲಾರಂಡ ಕಂಠಿ ಕಾರ್ಯಪ್ಪರವರ ನೇತೃತ್ವದಲ್ಲಿ ಚೇರಳ ಶ್ರೀಮಂಗಲ ಹಾಗೂ ಕಂಡಕರೆ ನೆಲ್ಲಿಹಡ್ಲುವಿನಲ್ಲಿ ಅಲ್ಲಿನ ನಿವಾಸಿಗಳಿಗೆ ದಿನಸಿಕಿಟ್ ವಿತರಿಸಲಾಯಿತು.
ಈ ಸಂದರ್ಭ ಬಿಜೆಪಿ ತಾಲೂಕು ಮಂಡಳ ಕಾರ್ಯದರ್ಶಿ ಮೇರಿ ಅಂಬುದಾಸ್, ಚೆಟ್ಟಳ್ಳಿ ಬಿಜೆಪಿ ಸ್ಥಾನೀಯ ಸಮಿತಿಯ ಉಪಾಧ್ಯಕ್ಷ ರವಿ.ಎನ್.ಎಸ್, ಕಾರ್ಯದರ್ಶಿ ಮರದಾಳುಹರಿ, ವಾರ್ಡ್ನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಾದ ಪೇರಿಯನ ಉದಯ, ರವಿ ಕಾಫಿ ಬೋರ್ಡ್, ಕಡ್ಯದ ಉದಯ, ಪುತ್ತರಿರ ಶಿವು ನಂಜಪ್ಪ, ಬಟ್ಟಿರ ಚಿರಂತ್ ಚಂಗಪ್ಪ, ಬಟ್ಟೀರ ಗಿರೀಶ್, ಮಣಿ ಹಾಜರಿದ್ದರು.