ಕಡಂಗ, ಜು. 26: ಎಸ್‍ಕೆಎಸ್‍ಎಸ್‍ಎಫ್ ಎಡಪಾಲ ವತಿಯಿಂದ ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಏರ್ಪಡಿಸಲಾಗಿತ್ತು. ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ನೀಡುವ ಸಲುವಾಗಿ ಎಸ್‍ಕೆಎಸ್‍ಎಸ್‍ಎಫ್ ಟ್ರೆಂಡ್ ಘಟಕದಡಿಯಲ್ಲಿ ಮಹೂರ್ಂ ಖಾಝಿ ಶೈಖುನಾ ಪೂಕಳಂ ಉಸ್ತಾದ್ ಜ್ಞಾಪಕಾರ್ಥವಾಗಿ ಎಕ್ಸೆಲೆನ್ಸ್ ಅವಾರ್ಡ್ ನೀಡಲಾಗಿದೆ.

ಕೊಡಗು ನಾಯಿಬ್ ಖಾಝಿ ಶೈಖುನಾ ಅಬ್ದುಲ್ಲಾ ಫೈಝಿ ಮುಖ್ಯ ಅತಿಥಿಗಳಾಗಿದ್ದ ವೇದಿಕೆಯ ಅಧ್ಯಕ್ಷ ಸ್ಥಾನವನ್ನು ಮಾಮು ಏರೆಟೆಂಡ ವಹಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿ ಆರ್ ಪಿ ಉಮ್ಮರ್ ಮಕ್ಕಳ ಶಿಕ್ಷಣಕ್ಕೆ ಪೆÇ್ರೀತ್ಸಾಹ ನೀಡುವುದನ್ನು ಹೇಳಿ ಪ್ರಶಂಸಿದರು.

ಊರಿನ ಹಲವಾರು ಗಣ್ಯ ವ್ಯಕ್ತಿಗಳಿದ್ದ ವೇದಿಕೆಯಲ್ಲಿ ಹನ್ನೊಂದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೆಮೆಂಟೋ ಹಾಗೂ ಪೆÇ್ರೀತ್ಸಾಹಕಧನ ನೀಡಿದರು. ನಂತರ ಭಾಷಣದಲ್ಲಿ ಎಸ್ ಕೆ ಎಸ್ ಎಸ್ ಎಫ್ ಎಡಪಾಲ ಈ ಹಿಂದೆ ಮಾಡಿದ ಊರಿನ ರಸ್ತೆ ಬದಿ ಸ್ವಚ್ಚಗೊಳಿಸುವಿಕೆ, ರಮದಾನ್ ಕಿಟ್ ವಿತರಣೆ ಹಾಗೂ ಕೋವಿಡ್-19 ಮುನ್ನೆಚ್ಚೆರಿಕೆಯಾಗಿ ಕಿಟ್ ಕಾಯ್ದಿರಿಸುವಿಕೆ ಬಗ್ಗೆ ತಿಳಿಸಿದರು. ಎಸ್‍ಕೆಎಸ್‍ಎಸ್‍ಎಫ್ ಎಡಪಾಲ ಅಧ್ಯಕ್ಷ ಶಹೀದ್ ಫೈಝಿ, ಉಪಾಧ್ಯಕ್ಷ ಹಾರಿಸ್ ಭಾಖವಿ, ಸೆಕ್ರೆಟರಿ ಹನೀಫ್ ಫೈಝಿ, ವಕಿರ್ಂಗ್ ಸೆಕ್ರೆಟರಿ ಸಿನಾನ್ ಎಸ್ ಎಸ್ ಹಾಗೂ ಟ್ರೆಂಡ್ ಸೆಕ್ರೆಟರಿ ರಾಫಿ ಕೆ.ಎಂ. ತಿಳಿಸಿದ್ದಾರೆ.