ಕಣಿವೆ, ಜು. 25: ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಅವರನ್ನು ಬದಲಿಸಲು ಪಟ್ಟುಹಿಡಿದಿರುವ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರ ಗುಂಪೆÇಂದು ಕುಶಾಲನಗರದ ಕಾವೇರಿ ನದಿ ದಂಡೆಯ ರೆಸಾರ್ಟ್ ಒಂದರಲ್ಲಿ ಗೌಪ್ಯ ಸಭೆ ನಡೆಸಿದೆ. ಕೆಪಿಸಿಸಿ ಸದಸ್ಯರು ಹಾಗೂ ಪಕ್ಷದ ಮಂಚೂಣಿ ಸ್ಥಾನದಲ್ಲಿದ್ದ ನಾಯಕರುಗಳು ಈ ಸಭೆಯ ಸಂಘಟಕರು ಎನ್ನಲಾಗಿದೆ. ಸಭೆಯಲ್ಲಿ ಕೊಡಗು ಜಿಲ್ಲಾದ್ಯಂತ ಮೂಲೆಮೂಲೆಗಳಿಂದ ಎರಡುನೂರಕ್ಕೂ ಅಧಿಕಮಂದಿ ಪಾಲ್ಗೊಂಡು ಪಕ್ಷದ ಜಿಲ್ಲಾಧ್ಯಕ್ಷರ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷದಲ್ಲಿ ಸಂಘಟನೆ ದುರ್ಬಲಗೊಳ್ಳುತ್ತಿದ್ದು, ಪಕ್ಷದ ಅಧ್ಯಕ್ಷ ಮಂಜುನಾಥ್ ಕುಮಾರ್ ಕಾಂಗ್ರೆಸ್ಸಿಗರನ್ನು ಒಗ್ಗೂಡಿಸಿ ಮುನ್ನಡೆಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಸಭೆಯನ್ನು ಸಂಘಟಿಸಿದ್ದ ಪಕ್ಷದ ನಾಯಕರ ಬಳಿ ಮಡಿಕೇರಿಯಿಂದ ಧಾವಿಸಿದ್ದ ಪಕ್ಷದ ಕಾರ್ಯಕರ್ತರೊಬ್ಬರು ತಮ್ಮ ನೋವು ತೋಡಿಕೊಂಡರೆ, ಎಲ್ಲರನ್ನು ಒಗ್ಗೂಡಿಸುವಲ್ಲಿ ಸೋತಿರುವ ಇಂತಹ ನಾಯಕತ್ವ ನಮಗೆ ಬೇಡ ಎಂದು ಕುಶಾಲನಗರ ಭಾಗದ ಪಕ್ಷದ ಘಟಕವೊಂದರ ಮಾಜಿ ಅಧ್ಯಕ್ಷರು ಆಕ್ರೋಶ ಹೊರಹಾಕಿದರು ಎನ್ನಲಾಗಿದೆ.
ವಿ.ಪಿ.ಶಶಿಧರ್ ಹಾಗೂ ಚಂದ್ರಕಲಾ ಅವರ ವಿಚಾರವಾಗಿ ಪಕ್ಷದ ಮನೆಯೊಳಗೆ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವ ಪ್ರಯತ್ನ ಮಾಡದೇ ಸುದ್ದಿ ಗೋಷ್ಠಿ ನಡೆಸಿ ನಮ್ಮ ನಾಯಕರ ವಿರುದ್ಧವೇ ಟೀಕೆ ಮಾಡುವ ಇಂತಹ ಅಧ್ಯಕ್ಷರು ನಮಗೆ ಬೇಡ ಎಂದು ಏಳನೇ ಹೊಸಕೋಟೆ ಭಾಗದ ಕಾರ್ಯಕರ್ತರೊಬ್ಬರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ. ಕುಶಾಲನಗರ ಬ್ಲಾಕ್‍ನ ಯುವ ಕಾಂಗ್ರೆಸ್ ಅಧ್ಯಕ್ಷರ ನೇಮಕದ ವಿಚಾರದಲ್ಲಿ ಪಕ್ಷದ ಮುಂಚೂಣಿಯ ನಾಯಕರುಗಳು ಇರುವಾಗ ಅವರ ಜೊತೆ ಚರ್ಚಿಸದೇ ಏಕಪಕ್ಷೀಯವಾಗಿ ಅಧ್ಯಕ್ಷರ ನೇಮಕ ಮಾಡಿರುವುದು ಪಕ್ಷಕ್ಕೆ ಶೋಭೆ ತರುತ್ತದಾ ಎಂದು ಸಭೆಯೊಳಗೆ ಕುಶಾಲನಗರದ ಕಾರ್ಯಕರ್ತರನೇಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.
ಪಕ್ಷದಲ್ಲಿ ಸದಾ ಸಕ್ರಿಯರಾಗಿ ಹಾಗೂ ಸಮರ್ಥರಾಗಿರುವವರನ್ನು ಗುರುತಿಸಿ ಅವರಿಗೆ ಪಕ್ಷದೊಳಗಿನ ಹುದ್ದೆಗಳನ್ನು ಕೊಡದೇ ತಮ್ಮ ಜೊತೆ ಸುತ್ತಾಡುವವರಿಗೆ ತಮಗಿಷ್ಟವಾದ ಹುದ್ದೆಗಳನ್ನು ನೀಡಿದ್ದಾರೆ ಎಂದು ಮೂರ್ನಾಡು ಹಾಗೂ ನಾಪೆÇೀಕ್ಲುವಿನಿಂದ ಧಾವಿಸಿದ್ದ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ. ಕಾರ್ಯಕರ್ತರು ಹಾಗೂ ವಿವಿಧ ನಾಯಕರಿಂದ ಪಕ್ಷದ ಜಿಲ್ಲಾಧ್ಯಕ್ಷರ ವಿರುದ್ಧದ ದೂರುಗಳನ್ನು ಆಲಿಸಿದ ಕೆಪಿಸಿಸಿ ಸದಸ್ಯರು ಹಾಗೂ ಪಕ್ಷದ ಮಾಜಿ ಅಧ್ಯಕ್ಷರುಗಳು
(ಮೊದಲ ಪುಟದಿಂದ) ಬೆಂಗಳೂರಿಗೆ ತೆರಳಿ ಡಿ.ಕೆ. ಶಿವಕುಮಾರ್ ಅವರ ಬಳಿ ಸಭೆಯಲ್ಲಿದ್ದ ಪಕ್ಷದ ನಾಯಕರು ಕಾರ್ಯಕರ್ತರ ಸಮ್ಮುಖದಲ್ಲಿ ಸುಧೀರ್ಘವಾಗಿ ನಡೆದ ಚರ್ಚಿತ ವಿಚಾರಗಳನ್ನು ವೀಡಿಯೋ ಸಹಿತ ಮನದಟ್ಟು ಮಾಡಿಕೊಡಲು ನಿರ್ಣಯ ಕೈಗೊಂಡರು ಎನ್ನಲಾಗಿದೆ. ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪುನರ್ ಸಂಘಟಿಸಲು ಮಂಜುನಾಥ್ ಕುಮಾರ್ ಪದಚ್ಯುತಿ ಆಗಲೇಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದು, ಎಂಎಲ್‍ಸಿ ವೀಣಾ ಅಚ್ಚಯ್ಯ, ಪಕ್ಷದ ವೀಕ್ಷಕಿ ಮಂಜುಳಾರಾಜ್ ಅವರನ್ನು ನಿಯೋಗದಲ್ಲಿ ಕರೆದೊಯ್ಯಲು ತೀರ್ಮಾನಿಸಿದರು ಎನ್ನಲಾಗಿದೆ.
ಕೆಪಿಸಿಸಿ ಸದಸ್ಯೆ ಕೆ.ಪಿ. ಚಂದ್ರಕಲಾ, ಕುಡಾ ಮಾಜಿ ಅಧ್ಯಕ್ಷ ಬಿ.ಜಿ. ಮಂಜುನಾಥ ಗುಂಡೂರಾವ್, ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಘಟಕದ ಅಧ್ಯಕ್ಷ ಜಯೇಂದ್ರ, ಕಾನೂನು ಘಟಕದ ಜಿಲ್ಲಾಧ್ಯಕ್ಷ ಧ್ರುವ, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ. ಅಬ್ದುಲ್ ಲತೀಫ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ವಿರಾಜಪೇಟೆ ಬ್ಲಾಕ್ ಅಧ್ಯಕ್ಷ ಸಲಾಂ, ಸೋಮವಾರಪೇಟೆ ಯುವ ಕಾಂಗ್ರೆಸ್ ಘಟಕದ ಮಂಜು, ಕುಶಾಲನಗರದ ಕಿರಣಕುಮಾರ್, ಕೊಡ್ಲಿಪೇಟೆ ಹೋಬಳಿ ಅಧ್ಯಕ್ಷ ಔರಂಗಜೇಬ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಬ್ದುಲ್ ರಜಾಕ್, ಡಿ.ಕೆ.ಶಿ ಅಭಿಮಾನಿ ಬಳಗದ ಅಧ್ಯಕ್ಷ ನವೀದ್ ಖಾನ್, ಕುಶಾಲನಗರದ ವಕೀಲ ಆರ್.ಕೆ. ನಾಗೇಂದ್ರ ಬಾಬು, ಪಟ್ಟಣ ಪಂಚಾಯತಿ ಸದಸ್ಯರಾದ ಕುಟ್ಟಂಡ ಪ್ರಮೋದ್ ಮುತ್ತಪ್ಪ, ಖಲೀಮುಲ್ಲಾ, ದಿನೇಶ್, ಜಯಲಕ್ಷ್ಮಿ, ಸೋಮವಾರಪೇಟೆ ಆದಂ ಸೇರಿದಂತೆ ಅನೇಕ ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.
-ಕೆ.ಎಸ್. ಮೂರ್ತಿ