ಮಡಿಕೇರಿ, ಜು. 25 : ಜಿಲ್ಲೆಯಲ್ಲಿ ತಾ.25 ರಂದು 19 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 342 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 249 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಒಟ್ಟು 5 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 88 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಾದ್ಯಂತ 110 ನಿಯಂತ್ರಿತ ವಲಯಗಳಿವೆ. ಹೊಸ ಪ್ರಕರಣಗಳ ವಿವರ

ಕಟ್ಟೆಮಾಡುವಿನ ಪರಂಬು ಪೈಸಾರಿಯ 45 ವರ್ಷದ ಮಹಿಳೆ, ಎಮ್ಮೆಮಾಡುವಿನ 50 ವರ್ಷದ ಪುರುಷ, ನಾಪೆÇೀಕ್ಲುವಿನ ಪಿಎಂಎಸ್ ಕಾಂಪ್ಲೆಕ್ಸ್ ಬೇತು ರಸ್ತೆ ಬಳಿಯ 29 ವರ್ಷದ ಪುರುಷ , ಕೇರಳ ಪ್ರಯಾಣದ ಇತಿಹಾಸವಿದ್ದು, ಸೋಂಕು ದೃಢಪಟ್ಟಿದೆ. ಕುಶಾಲನಗರದ ದಂಡಿನಪೇಟೆಯ 29 ವರ್ಷದ ಪುರುಷ, ಸುಂಟಿಕೊಪ್ಪದ 1ನೇ ಬ್ಲಾಕಿನ 12 ವರ್ಷದ ಬಾಲಕ, ವೀರಾಜಪೇಟೆಯ ಗಾಂಧಿನಗರದ 20 ವರ್ಷದ ಪುರುಷ, ಅರವತ್ತೊಕ್ಲುವಿನ 18 ವರ್ಷದ ಮಹಿಳೆ, ಮಡಿಕೇರಿಯ ಹಿಲ್‍ಡೇಲ್ ರೆಸಾರ್ಟ್ ಹಿಂಭಾಗದ 46 ವರ್ಷದ ಪುರುಷ, ಕಡಗದಾಳುವಿನ 33 ವರ್ಷದ ಪುರುಷ, ಮಡಿಕೇರಿ ಕಾಲೇಜು ರಸ್ತೆಯ 40 ಮತ್ತು 30 ವರ್ಷದ ಪುರುಷರು, ನೀರುಕೊಲ್ಲಿಯ 23 ವರ್ಷದ ಪುರುಷ, ಬೆಟ್ಟಗೇರಿಯ 51 ವರ್ಷದ ಪುರುಷ, ನಾಪೆÇೀಕ್ಲು ಬೇತುವಿನ 27 ವರ್ಷದ ಪುರುಷ, ಮಡಿಕೇರಿಯ ಪ್ರಕೃತಿ ಲೇಔಟ್‍ನ 62 ವರ್ಷದ ಮಹಿಳೆ, ಮಡಿಕೇರಿ ಕಾನ್ವೆಂಟ್ ರಸ್ತೆಯ

(ಮೊದಲ ಪುಟದಿಂದ) 11 ವರ್ಷದ ಬಾಲಕಿ, ಮಡಿಕೇರಿ ಮಹದೇವಪೇಟೆಯ 28 ವರ್ಷದ ಪುರುಷ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ, ಗೋಣಿಕೊಪ್ಪದ 50 ವರ್ಷದ ಪುರುಷ ಆರೋಗ್ಯ ಕಾರ್ಯಕರ್ತ, ಪೆÇನ್ನಂಪೇಟೆ ರಸ್ತೆಯ ಕಾಫಿ ಬೋರ್ಡ್‍ನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಲೋನಿಯ 25 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಹೊಸ ನಿಯಂತ್ರಿತ ಪ್ರದೇಶಗಳು

ಪರಂಬು ಪೈಸಾರಿ, ಎಮ್ಮೆಮಾಡು, ಪಿ.ಎಮ್.ಎಸ್ ಕಾಂಪ್ಲೆಕ್ಸ್ ನಾಪೋಕ್ಲು, ವೀರಾಜಪೇಟೆಯ ಗಾಂಧಿನಗರ, ಮಡಿಕೇರಿಯ ಹಿಲ್‍ಡೇಲ್ ರೆಸಾರ್ಟ್ ಹಿಂಭಾಗ, ಕಡಗದಾಳು, ಸುಂಟಿಕೊಪ್ಪದ 1ನೇ ಬ್ಲಾಕ್, ಗೋಣಿಕೊಪ್ಪ ಆರೋಗ್ಯ ವಸತಿಗೃಹ, ಮಡಿಕೇರಿಯ ಕಾಲೇಜು ರಸ್ತೆ, ಬೆಟ್ಟಗೇರಿಯ ಅಂಚೆಕಚೇರಿ ಸಮೀಪ, ಬೇತು ಗ್ರಾಮ ಬಳಿಯ ಮಕ್ಕಿ ರಸ್ತೆ ಸಮೀಪ, ಮಡಿಕೇರಿಯ ಪ್ರಕೃತಿ ಲೇಔಟ್ ಹಾಗೂ ಚೌಡೇಶ್ವರಿ ದೇವಾಲಯದ ಸಮೀಪ ಹೊಸ ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ.

ನಿಯಂತ್ರಿತ ಪ್ರದೇಶಗಳ ತೆರವು

ಬೆಸೂರು, ಮಡಿಕೇರಿಯ ಭಗವತಿನಗರ, ಗೋಣಿಕೊಪ್ಪದ ಎಮ್.ಎಮ್ ಲೇಔಟ್, ಗುಡುಗಳಲೆ, ಕೆದಮುಳ್ಳೂರು, ಕುಸುಬೂರು, ಗೋಣಿಕೊಪ್ಪದ ನೇತಾಜಿ ಲೇಔಟ್ ಹಾಗೂ ಮಡಿಕೇರಿಯ ಪೊಲೀಸ್ ವಸತಿಗೃಹ ಪ್ರದೇಶಗಳನ್ನು ಸಾರ್ವಜನಿಕರಿಗೆ ಮುಕ್ತ ಗೊಳಿಸಲಾಗಿದೆ.