ಮಡಿಕೇರಿ, ಜು. 24: ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಆಶಾ ಕಾರ್ಯಕರ್ತೆಯರಾದ ಯಶೋಧ ಕುಮಾರಿ, ಮಮತ ಸಿ.ಎಸ್., ಪಾರ್ವತಿ ಕೆ., ಸರೋಜ ಬಿ.ವಿ. ಹಾಗೂ ಸುನಿತಾ ಅವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಿ, ತಲಾ ರೂ. 3000 ಪ್ರೋತ್ಸ್ಸಾಹÀಧನ ನೀಡಲಾಯಿತು.
ಸಂಘದ ಸಿ.ಇ.ಓ. ಕೆ.ಪಿ. ಸೀತಮ್ಮ ಸನ್ಮಾನಿತರನ್ನು ಸ್ವಾಗತಿಸಿದರು. ಅಧ್ಯಕ್ಷ ಮಂಞರ ಸಾಬು ತಿಮ್ಮಯ್ಯ, ಉಪಾಧ್ಯಕ್ಷ ಇಂದ್ರಕುಮಾರ್, ಕೋವಿಡ್-19ನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಶ್ರಮಿಸುತ್ತಿರುವ ಆಶಾ ಕಾರ್ಯ ಕರ್ತೆಯರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಸಭೆಯಲ್ಲಿ ನಿರ್ದೇಶಕರಾದ ತೋರೆರ ಎಂ. ಅಯ್ಯಪ್ಪ, ಉಳುವಾರನ ಎನ್. ಪಳಂಗಪ್ಪ, ತುಂತ್ತಜ್ಜಿರ ಆರ್. ತಿಮ್ಮಯ್ಯ, ಅಮ್ಮಾಟಂಡ ಸಿ. ಅಪ್ಪಣ್ಣ, ಪರ್ಲಕೋಟಿ ಎ. ಕಾವೇರಪ್ಪ, ಕೂಪದೀರ ಸಿ. ಪ್ರಮೀಳ, ಬಿದ್ದಂಡ ಡಿ. ಗಂಗಮ್ಮ, ತೆಕ್ಕಡೆ ಆರ್. ಹರಿಣಿ, ಮಲೆಯರ ಆರ್. ಧರಣೇಶ್, ಹೆಚ್.ಆರ್. ವಾಸಪ್ಪ ಹಾಜರಿದ್ದರು.