ಕೂಡಿಗೆ, ಜು. 23: ಕೂಡಿಗೆ ಗ್ರಾಮ ಪಂಚಾಯಿತಿಯ ಕೂಡಿಗೆ-ಹಾಸನ ಹೆದ್ದಾರಿಯ ಸೋಮವಾರಪೇಟೆ ಸರ್ಕಲ್ಗೆ ಹೈಮಾಸ್ಟ್ ದೀಪಗಳನ್ನು ಅಳವಡಿಸಬೇಕೆಂಬದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.
ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡು ಸರ್ಕಲ್ನ ವ್ಯಾಪ್ತಿಯು ವಿವಿಧ ವರ್ತಕರುಗಳಿಂದ ಸುಸಜ್ಜಿತವಾದ ಅಂಗಡಿ ಮಳಿಗೆಗಳು ನಿರ್ಮಾಣವಾಗಿವೆ. ಅಲ್ಲದೆ ಈ ಪ್ರದೇಶದಲ್ಲಿ ದಿನಂಪ್ರತಿ ನೂರಾರು ಕಾರ್ಮಿಕರು ಸೇರಿದಂತೆ ಕೂಡಿಗೆ-ಕೂಡುಮಂಗಳೂರು ಭಾಗದಲ್ಲಿ ಅನೇಕ ಬೃಹತ್ ಕೈಗಾರಿಕಾ ಕೇಂದ್ರಗಳು ಸಹ ಇದ್ದು, ವ್ಯಾಪಾರ-ವಹಿವಾಟು ನಡೆಯುವ ಕೇಂದ್ರವು ಆಗಿದೆ. ಆದುದರಿಂದ ಈ ಭಾಗದಲ್ಲಿ ಹೈಮಾಸ್ಟ್ ದೀಪವನ್ನು ಅಳವಡಿಸುವಂತೆ ಗ್ರಾಮಸ್ಥರ ಒತ್ತಾಯವಾಗಿದೆ.
ಸಂಬಂಧಿಸಿದ ಗ್ರಾಮ ಪಂಚಾಯಿತಿ, ನೋಡಲ್ ಅಧಿಕಾರಿ ಮತ್ತು ಅಭಿವೃದ್ಧಿ ಅಧಿಕಾರಿಗಳು ಇತ್ತ ಗಮನ ಹರಿಸಬೇಕೇಂದು ಆಗ್ರಹಿಸಿದ್ದಾರೆ.